Friday, April 26, 2024
spot_imgspot_img
spot_imgspot_img

ಗುಂಡು ಹಾರಿಸಿದ ಯುವತಿಯ ಬಂಧನ

- Advertisement -G L Acharya panikkar
- Advertisement -

ನವದೆಹಲಿ: ದೆಹಲಿಯ ಚೌಹಾಣ್ ಬಂಗಾರು ಎಂಬಲ್ಲಿ ಅಂಗಡಿಯೊಂದರ ಎದುರು ಗುಂಡು ಹಾರಿಸಿದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

28ರ ಹರೆಯದ ಯುವತಿ ಅಂಗಡಿ ಮುಂದೆ ಗುಂಡು ಹಾರಿಸಿದ ದೃಶ್ಯ ವೈರಲ್ ಆಗಿತ್ತು. ಅಂಗಡಿ ಮಾಲಿಕನಿಗೂ ಯುವತಿಗೂ ಈ ಹಿಂದೆ ಜಗಳವಾಗಿತ್ತು. ನವೆಂಬರ್ 18 ರಂದು ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.

ಯುವತಿ ಅಂಗಡಿಯಿಂದ ಮೊಬೈಲ್ ಖರೀದಿಸಿದ್ದಳು ಎನ್ನಲಾಗಿದೆ. ಮಾತಿನ ಚಕಮಕಿ ಬಳಿಕ ಯುವತಿ ಗುಂಡು ಹಾರಿಸಿದ್ದಾಳೆ. ಯುವತಿ ಮದ್ಯದ ಅಮಲಿನಲ್ಲಿ ಈ ಕೃತ್ಯ ಎಸಗಿದ್ದಾಳೆ ಎಂಬ ಸಂಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಯುವತಿ ಗುಂಡು ಹಾರಿಸಿದ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.

- Advertisement -

Related news

error: Content is protected !!