Saturday, November 28, 2026
spot_imgspot_img
spot_imgspot_img

ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ತುಂಗಾ ಆರತಿಯ ಸಂದರ್ಭ ವಿಟ್ಲದ ಬಾಲಕಿಯರ ಭಕ್ತಿ ಗಾನ – ಭಕ್ತರ ಮೆಚ್ಚುಗೆ

- Advertisement -
- Advertisement -

ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ, ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯೊಂದಿಗೆ ನವೆಂಬರ್‍ 24ರಂದು ಕಾರ್ತಿಕ ಪೌರ್ಣಮಿ ಪ್ರಯುಕ್ತ ತುಂಗಾ ನದಿಯ ತೀರದಲ್ಲಿ ನಡೆದ ತುಂಗಾ ಆರತಿಯ ಸಂದರ್ಭದಲ್ಲಿ, ವಿಟ್ಲ ಅಳಕೆಮಜಲು ನಿವಾಸಿಗಳಾದ ಕುಮಾರಿ ಆತ್ಮಶ್ರೀ ಮತ್ತು ಕುಮಾರಿ ಆದಿಶ್ರೀ ಮರುವಳ ಹಾಗೂ ,ಕುಮಾರಿ ಸಾನ್ವಿ ಕಜೆ ಮತ್ತು ಕುಮಾರಿ ಮಾನ್ವಿ ಕಜೆ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮವು ಅತ್ಯಂತ ಭಕ್ತಿಪೂರ್ವಕವಾಗಿ ನೆರವೇರಿತು.

ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಂಗೀತ ಕಾರ್ಯಕ್ರಮವು ನೆರೆದಿದ್ದ ಸಮಸ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಯಿತು. ಕುಮಾರಿ ಆತ್ಮಶ್ರೀ ಮತ್ತು ಕುಮಾರಿ ಆದಿಶ್ರೀ ಮರುವಳ ಇವರು ವಿಟ್ಲದ ವಕೀಲರು ಹಾಗೂ ನೋಟರಿ ಪಬ್ಲಿಕ್ ಆಗಿರುವ ಮರುವಳ ಕೃಷ್ಣರಾಜ ಹಾಗೂ ಪರಿಣಿತ ದಂಪತಿಗಳ ಪುತ್ರಿಯರಾಗಿದ್ದು, ಕುಮಾರಿ ಸಾನ್ವಿ ಕಜೆ ಮತ್ತು ಕುಮಾರಿ ಮಾನ್ವಿ ಕಜೆ ಇವರು ವಿಟ್ಲದ ಕಜೆ ಡೆಂಟಲ್ ಕೇರ್ ಕ್ಲಿನಿಕ್‌ನ ವೈದ್ಯರುಗಳಾದ ಡಾ|| ಚರಣ್ ಕಜೆ ಹಾಗೂ ಡಾ|| ರಮ್ಯ ಕಜೆ ದಂಪತಿಗಳ ಪುತ್ರಿಯರಾಗಿರುತ್ತಾರೆ.

- Advertisement -

Related news

error: Content is protected !!