- Advertisement -
- Advertisement -
ಕಲ್ಲಡ್ಕದ ಹಿಮಾನಿ ಕೆ. ಕಲಾಶ್ರೀ ಪ್ರಶಸ್ತಿಗೆ ಆಯ್ಕೆ


ನವೆಂಬರ್ 25 ರಂದು ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಬಾಲ ಭವನ ಸೊಸೈಟಿ (ರಿ) ಕಬ್ಬನ್ ಪಾರ್ಕ್ ಬೆಂಗಳೂರು ಇಲ್ಲಿ ಆಯೋಜಿಸಿದ “ರಾಜ್ಯ ಮಟ್ಟದ ಕಲಾಶ್ರೀ ಶಿಬಿರ 2026” ಪ್ರಶಸ್ತಿ ಆಯ್ಕೆ ಶಿಬಿರದ ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ ಏಕಪಾತ್ರಾಭಿನಯವನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆದು ರಾಜ್ಯದ ಮುಖ್ಯಮಂತ್ರಿಯಾದ ಡಿ. ಕೆ ಶಿವಕುಮಾರ್ ಇವರಿಂದ ಕಲಾಶ್ರೀ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಇವರು ಕಲ್ಲಡ್ಕ ಶ್ರೀ ರಾಮ ಹಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿಯ ಹಿಮಾನಿ ಕೆ . ಇವರು ದಾಸಕೋಡಿಯ ಕಿಶೋರ್ ಮತ್ತು ದೀಕ್ಷಾ ದಂಪತಿಯ ಪುತ್ರಿಯಾಗಿದ್ದಾರೆ. ಇವರನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು , ಸಂಚಾಲಕರು, ಶಾಲಾ ಆಡಳಿತ ಮಂಡಳಿ , ಮುಖ್ಯೋಪಾಧ್ಯಾಯರು, ಅಧ್ಯಾಪಕ – ಅಧ್ಯಾಪಕೇತರ ವೃಂದದವರು ಅಭಿನಂದನೆ ಸಲ್ಲಿಸಿದರು.
- Advertisement -








