Wednesday, May 15, 2024
spot_imgspot_img
spot_imgspot_img

ಧರ್ಮಸ್ಥಳ: ಸ್ನಾನಕ್ಕೆಂದು ತೆರಳಿದ್ದ ಮಹಿಳೆ ಜತೆ ಯುವಕನ ಅನುಚಿತ ವರ್ತನೆ

- Advertisement -G L Acharya panikkar
- Advertisement -

ಧರ್ಮಸ್ಥಳ: ಸ್ನಾನ ಮಾಡಲೆಂದು ಬಚ್ಚಲು ಮನೆಗೆ ತೆರಳಿದ್ದ ಮಹಿಳೆಯ ಜತೆ ಯುವಕನೋರ್ವ ಅನುಚಿತವಾಗಿ ವರ್ತಿಸಿದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ ಈ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಮನೋಜ್ ಓ ಆರ್ ಎಂಬಾತನ ವಿರುದ್ಧ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೋರ್ವರು ತಮ್ಮ ಮನೆಯಲ್ಲಿ ಸ್ನಾನ ಮಾಡುವ ಸಲುವಾಗಿ ಬಚ್ಚಲು ಮನೆಗೆ ಹೋದಾಗ ನೆರೆಮನೆಯ ಯುವಕ ಮನೋಜ್ ಓ ಆರ್ ಎಂಬಾತನು ಬಚ್ಚಲು ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಈ ವೇಳೆ ಮಹಿಳೆ ಬೊಬ್ಬೆ ಹೊಡೆದಾಗ ಆರೋಪಿಯು ಅಲ್ಲಿಂದ ಓಡಿ ಹೋಗಿದ್ದಾನೆ ಎಂದು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!