ಅಧ್ಯಕ್ಷರಾಗಿ ಜನಾರ್ಧನ ಕಾರ್ಯಾಡಿ, ಉಪಾಧ್ಯಕ್ಷರಾಗಿ ಧನರಾಜ್ ಅಮೈ, ಕಾರ್ಯದರ್ಶಿಯಾಗಿ ಶೈಲೇಶ್ ಮೂಡೈಮಾರು ಆಯ್ಕೆ




ಧರ್ಮನಗರ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸದಾ ಸಮಾಜದ ಏಳಿಗೆಗಾಗಿ ದುಡಿಯುವ ಸಿದ್ದಿವಿನಾಯಕ ಯುವಕ ಮಂಡಲವು ಮತ್ತೊಮ್ಮೆ ತನ್ನ ಕಾರ್ಯದರ್ಶತ್ವದಿಂದ ಜನಮನ್ನಣೆ ಗಳಿಸಿದೆ. ಸಮಾಜಮುಖಿ ಕಾರ್ಯಗಳ ಮೂಲಕ ತನ್ನ ಛಾಪನ್ನು ಮೂಡಿಸಿರುವ ಸಿದ್ದಿವಿನಾಯಕ ಯುವಕ ಮಂಡಲದ ವಾರ್ಷಿಕ ಸಭೆ ಮತ್ತು 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಗುರುವಾರ (ಜು.09)ದಂದು ಧರ್ಮನಗರದ ಸಮಾಜ ಮಂದಿರದಲ್ಲಿ ಉತ್ಸಾಹಭರಿತ ವಾತಾವರಣದಲ್ಲಿ ನಡೆಯಿತು.

ಅಶಕ್ತ ಕುಟುಂಬಕ್ಕೆ ಗೃಹ ನಿರ್ಮಾಣ, ಬಸ್ ಸ್ಟಾಂಡ್ ನಿರ್ಮಾಣ,ರಕ್ತದಾನ, ಸ್ವಚ್ಛತಾ ಅಭಿಯಾನ,ಕೈ ಚೀಲ ವಿತರಣೆ ಹೀಗೆ ಪ್ರತಿ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಮಂಡಲವು ಯುವಶಕ್ತಿಯ ಸ್ಫೂರ್ತಿ ಕೇಂದ್ರವಾಗಿ ಬೆಳೆದಿದೆ. ಇದೇ ಸೇವಾ ಮನೋಭಾವಕ್ಕೆ ಮನ್ನಣೆಯಾಗಿ ಮಂಡಲಕ್ಕೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೂ ಸಂದಿದೆ.
ಸಿದ್ದಿವಿನಾಯಕ ಯುವಕ ಮಂಡಲದ 2026/27ನೇ ಸಾಲಿನ ಗೌರವಾಧ್ಯಕ್ಷರಾಗಿ ತಾರನಾಥ್ ಉರಿಮಜಲು, ಪುರುಷೋತ್ತಮ ಮುಂಡ್ರಬೈಲು, ಅಧ್ಯಕ್ಷರಾಗಿ ಜನಾರ್ಧನ ಕಾರ್ಯಾಡಿ, ಉಪಾಧ್ಯಕ್ಷರಾಗಿ ಧನರಾಜ್ ಅಮೈ, ಕಾರ್ಯದರ್ಶಿಯಾಗಿ ಶೈಲೇಶ್ ಮೂಡೈಮಾರು, ಕೋಶಾಧಿಕಾರಿಯಾಗಿ ಜೈದೀಪ್ ಅಮೈ ಆಯ್ಕೆಯಾದರು.

2026/27ನೇ ಸಾಲಿನ ಕಾರ್ಯಕಾರಿಣಿ ಸಮಿತಿ:
ಅಧ್ಯಕ್ಷರಾಗಿ ಜನಾರ್ಧನ ಕಾರ್ಯಾಡಿ, ಉಪಾಧ್ಯಕ್ಷರಾಗಿ ಧನರಾಜ್ ಅಮೈ, ಕಾರ್ಯಾಧ್ಯಕ್ಷರಾಗಿ ಅಜಿತ್ ದೇವಸ್ಯ, ಕಾರ್ಯದರ್ಶಿ ಶೈಲೇಶ್ ಮೂಡೈಮಾರು, ಜತೆ ಕಾರ್ಯದರ್ಶಿ ಚರಣ್ ಅಮೈ, ಕೋಶಾಧಿಕಾರಿಯಾಗಿ ಜೈದೀಪ್ ಅಮೈ, ಸಂಘಟನಾ ಕಾರ್ಯದರ್ಶಿ ಮನೋರಂಜನ್ ಅಮೈ, ಚರಣೇಶ್ ದೇವಸ್ಯ, ವ್ಯವಸ್ಥಾ ಪ್ರಮುಖರಾಗಿ ವಿಶ್ವನಾಥ ಅಮೈ, ಚೈತ್ರೇಶ್ ದೇವಸ್ಯ, ಕೀರ್ತನ್ ಅಮೈ, ಸೇವಾನಿಧಿ ಪ್ರಮುಖರಾಗಿ ಸಂದೀಪ್ ಬಿ ಕಾರ್ಯಾಡಿ, ಕ್ರೀಡಾ ಕಾರ್ಯದರ್ಶಿ ಪವನ್ ಕಾರ್ಯಾಡಿ, ಜಗದೀಶ ನೂಜಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀನಿವಾಸ ಮುಂಡ್ರಬೈಲು ಹಾಗೂ ಜಾಲತಾಣ ಪ್ರಮುಖರಾಗಿ ಕಿರಣ್ ಕಾರ್ಯಾಡಿ ಆಯ್ಕೆಯಾದರು.








