- Advertisement -
- Advertisement -

ಧರ್ಮಸ್ಥಳ:ಕೊರೊನಾ ರಗಳೆಯ ಮಧ್ಯೆಯು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕೊಂಚ ಖುಷಿ ಆವರಿಸಿದೆ.ಈ ಖುಷಿಗೆ ಕಾರಣ ದೇಗುಳದ ಲಕ್ಷ್ಮಿ ಆನೆಯು ನಿನ್ನೆ ರಾತ್ರಿ ಹೆಣ್ಣು ಮರಿಗೆ ಜನ್ಮ ನೀಡಿದೆ.ಲಕ್ಷೀ ಹೆಣ್ಣು ಮರಿಗೆ ಜನ್ಮ ನೀಡಿರೋದು ದೇವಾಲಯದ ಆಡಳಿತ ಮಂಡಳಿ,ಸಿಬ್ಬಂದಿ ಹಾಗು ಭಕ್ತರ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ.


ಇನ್ನು ಈ ಲಕ್ಷ್ಮೀ ಆನೆಯನ್ನು ವಿಜಯನಗರ ಶಾಸಕ ಆನಂದ್ ಸಿಂಗ್ ಅವರು 2009 ರಲ್ಲಿ ಧರ್ಮಸ್ಥಳ ದೇಗುಲಕ್ಕೆ ಕೊಡುಗೆಯಾಗಿ ನೀಡಿದ್ದರು.ಇದೀಗ ಆನೆ ಮರಿಗೆ ಜನ್ಮ ನೀಡಿರೋದು ಎಲ್ಲರ ಸಂತಸಕ್ಕೆ ಕಾರಣವಾಗಿದ್ದು ,ಆನೆಯ ಮಾವುತ ಆನೆಯ ಆರೈಕೆಯಲ್ಲಿ ತೊಡಗಿದ್ದಾರೆ.


- Advertisement -