Sunday, June 14, 2026
spot_imgspot_img
spot_imgspot_img

ಧರ್ಮಸ್ಥಳ: ಹಾವು ಕಡಿದು ಮಹಿಳೆ ಸಾವು..!

- Advertisement -
- Advertisement -

ಧರ್ಮಸ್ಥಳ: ಹಾವು ಕಡಿದು ಮಹಿಳೆಯೋರ್ವರು ಮೃತಪಟ್ಟ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ನಾರ್ಯ ನಿವಾಸಿ ಶಾಂತಾ (68) ಎಂದು ಗುರುತಿಸಲಾಗಿದೆ.

ಮನೆಯ ಹಿಂಬದಿಯಲ್ಲಿ ಬಟ್ಟೆಯನ್ನು ಒಗೆಯಲು ಸಾಬೂನು ತೆಗೆಯುವ ಸಂದರ್ಭದಲ್ಲಿ ಕಿಟಕಿಯಲ್ಲಿ ಯಾವುದೋ ವಿಷದ ಹಾವು ಎಡಗೈ ಕಿರು ಬೆರಳಿಗೆ ಕಡಿದಿತ್ತು. ಮನೆ ಮದ್ದು ಮಾಡಿ ಬಳಿಕ ಉಜಿರೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೇ 3ರಂದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!