Monday, July 20, 2026
spot_imgspot_img
spot_imgspot_img

ಧಾರವಾಡ: ಕೊರಿಯನ್ ಗೇಮ್‍ ಗೀಳಿಗೆ ಯುವಕ ಬಲಿ!

- Advertisement -
- Advertisement -

ಧಾರವಾಡ: ಕೊರಿಯನ್ ಗೇಮ್‍ ಗೀಳಿಗೆ ಯುವಕನೊಬ್ಬ ಬಲಿಯಾದ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್‍ನಲ್ಲಿ ನಡೆದಿದೆ.
ಫೆ.6 ರಂದು ನೇಣಿಗೆ ಶರಣಾದ ಯುವಕನನ್ನು ವಿಕಾಸ್ (20) ಎಂದು ಗುರುತಿಸಲಾಗಿದೆ. ಸಾವಿನ ನಂತರ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೊಬೈಲ್ ಪರಿಶೀಲನೆ ವೇಳೆ ಕೊರಿಯನ್ ಗೆಮ್ಸ್ ಪತ್ತೆಯಾಗಿದೆ.

ಕೊರಿಯನ್ ಗೆಮ್ಸ್‌ಗೆ ವಿಕಾಸ್ ಅಡಿಕ್ಟ್ ಆಗಿದ್ದ‌ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ. ಪಿಯುಸಿ ಸೈನ್ಸ್ ಮುಗಿಸಿ ಮನೆಯಲ್ಲೇ ಇದ್ದ ವಿಕಾಸ್ ಯಾರಿಗೂ ಗೊತ್ತಿಲ್ಲದೇ ಗೆಮ್ಸ್ ಆಡುತಿದ್ದ. ಇನ್ನೂ ಸಾವಿಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣ ಎಂದು ಸೆಲ್ಫ್ ಮೆಸೇಜ್ ಮಾಡಿ‌ ಸಾವಿಗೀಡಾಗಿದ್ದ. ಈ ಸಂಬಂಧ ಅಸಹಜ ಸಾವು ಎಂದು ದೂರು ದಾಖಲಾಗಿತ್ತು ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!