Sunday, June 7, 2026
spot_imgspot_img
spot_imgspot_img

ಕುಂದಾಪುರ: ಎದೆ ಹಾಲು ಕುಡಿದ ಬಳಿಕ ಹಸುಗೂಸು ಮೃತ್ಯು

- Advertisement -
- Advertisement -

ಕುಂದಾಪುರ: ಕೇವಲ 43 ದಿನದ ಹಸುಗೂಸು ತಾಯಿ ಎದೆ ಹಾಲು ಕುಡಿದು ಕೆಲವೇ ಹೊತ್ತಿನಲ್ಲಿ ಸಾವನ್ನಪ್ಪಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗುಜ್ಜಾಡಿ ಗ್ರಾಮದ ನೇತ್ರಾವತಿ ಎಂಬುವರ 43 ದಿನದ ಹಸುಗೂಸು ಸಾವನ್ನಪ್ಪಿದ ಮಗು. ಮಂಗಳವಾರ ಬೆಳಿಗ್ಗೆ ಎಂಟು ಗಂಟೆಯ ಸುಮಾರಿಗೆ ತಾಯಿ ಎದೆಹಾಲು ಕುಡಿಸಿ ರೂಮಿನಿಂದ ಹೊರಗೆ ಬಂದಾಗ ನೇತ್ರಾವತಿಯವರ ತಂದೆ ಮಗುವನ್ನು ನೋಡಲು ಒಳಗೆ ಹೋಗಿದ್ದಾರೆ. ಆಗ ಮಗು ಉಸಿರಾಡುತ್ತಿಲ್ಲ ಎನ್ನುವ ಅನುಮಾನ ಬಂದಿದೆ.

ತಕ್ಷಣ ಮಗುವನ್ನು ಮುಟ್ಟಿದಾಗಲೂ ಯಾವುದೇ ಪ್ರತಿಕ್ರಿಯೆ ಇಲ್ಲದೇ ಇದ್ದು ಮಗುವಿನ ಮೈ ತಣ್ಣಗಾಗಿದ್ದು ತಕ್ಷಣವೇ ಮಗುವನ್ನು ಕರೆದುಕೊಂಡು ಕುಂದಾಪುರದ ವಿನಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗು ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!