Saturday, June 28, 2025
spot_imgspot_img
spot_imgspot_img

ಬೆಳ್ತಂಗಡಿ : ಪೈಪ್ ಲೈನ್ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು

- Advertisement -
- Advertisement -

ಬೆಳ್ತಂಗಡಿ : ಪೆಟ್ರೋನೆಟ್ ಕಂಪೆನಿಗೆ ಸೇರಿದ ಡೀಸೆಲ್ ಪೈಪ್ ಲೈನ್ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಡೀಸೆಲ್ ಕಳವು ನಡೆಸಿದ ಘಟನೆ ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ನಡೆದಿದೆ.

ಈ ಬಗ್ಗೆ ಪೆಟ್ರೋನೆಟ್ ಎಚ್ ಬಿ ಲಿಮಿಟೆಡ್ ಕಂಪೆನಿಯ ನೆರಿಯಾ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಜಿ ಅವರು ಧಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರು ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್ ಪೈಪ್‌ ಮೂಲಕ ಡಿಸೇಲ್ ಸರಬರಾಜು ಆಗುತ್ತಿದ್ದು, ಮಾ 16 ರಿಂದ 19 ರ ರಾತ್ರಿಯ ಮಧ್ಯದ ಅವಧಿಯಲ್ಲಿ ಡಿಸೇಲ್ ಪೈಪ್‌ ಲೈನ್ ಕೊರೆದ ಕಳ್ಳರು 2.5 ಇಂಚು ಎಚ್ ಡಿ ಪಿ ಇ ಪೈಪ್ ಮೂಲಕ ಅಂದಾಜು 12 ಸಾವಿರ ಲೀಟರ್‌ಗೂ ಅಧಿಕ ಡಿಸೇಲ್ ಕಳವು ಮಾಡಿದ್ದಾರೆ, ಕಳವಾಗಿರುವ ಡೀಸೆಲ್ ಅಂದಾಜು ಮೌಲ್ಯ 9.60 ಲಕ್ಷ ರೂಪಾಯಿ ಆಗಿದೆ.

ಈ ಬಗ್ಗೆ ಧರ್ಮಸ್ಥಳ 19/2024 0 427, 285, 379 3 ಕಲಂ 15(2) ಪೆಟ್ರೋನೆಟ್ ಕಾಯ್ದೆ ಕಲಂ 3(2) ಪ್ರಿವೆನ್ಸೆನ್ ಆಫ್ ಡ್ಯಾಮೆಜ್ ಟು ಪಬ್ಲಿಕ್ ಪ್ರಾಪರ್ಟಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!