Monday, June 15, 2026
spot_imgspot_img
spot_imgspot_img

ಮಂಗಳೂರು: ಹಮಾಸ್ ಉಗ್ರರನ್ನು ಬೆಂಬಲಿಸಿ ವಿಡಿಯೋ ಮಾಡಿ ವೈರಲ್; ಝಾಕೀರ್ ಅರೆಸ್ಟ್..!

- Advertisement -
- Advertisement -

ಮಂಗಳೂರು: ಉಗ್ರ ಸಂಘಟನೆ ಹಮಾಸ್ ಉಗ್ರರ ಪರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ವೈರಲ್ ಮಾಡಿದ್ದ ಮಂಗಳೂರು ಬಂದರು ನಿವಾಸಿ ಝಾಕೀರ್‌ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈತನ ಕೃತ್ಯದಿಂದ ಸಮಾಜದಲ್ಲಿ ಕೋಮು ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆಗಳಿದ್ದರಿಂದ ಮಂಗಳೂರು ಬಂದರು ಠಾಣಾ ಸಬ್ ಇನ್ಸ್‌ಪೆಕ್ಟರ್ ವಿನಾಯಕ ತೋರಗಲ್ ಅವರು ಸ್ವಪ್ರೇರಿತಾ ದೂರು ದಾಖಲಿಸಿದ ಆರೋಪಿ ಝಾಕೀರ್‌ನನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ಝಾಕೀರ್ ಮೇಲೆ ಈ ಹಿಂದೆ ಕೂಡ ಬಂದರು ಠಾಣೆಯಲ್ಲಿ ದಾಖಲಾದ 7 ಪ್ರಕರಣಗಳಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ಯಾಲೆಸ್ಟಿನ್ ಮತ್ತು ಇಸ್ರೇಲ್ ಮಧ್ಯೆ ಪ್ರಸ್ತುತ ಯುದ್ದ ನಡೆಯುತ್ತಿದ್ದು ಇದರಲ್ಲಿ ಇಸ್ರೇಲ್ ವಿರುದ್ದ ಹೋರಾಡುತ್ತಿರುವ ಹಮಾಸ್ ಸಂಘಟನೆಗೆ ಎಲ್ಲರೂ ದುವಾ ಮಾಡಬೇಕೆಂದಯ ಝಾಕೀರ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ.

ಇದಕ್ಕೆ ಹಿಂದೂ ಪರ ಸಂಘಟನೆಗಳು ಮತ್ತು ಇತರರಿಂದ ಬಹಳಷ್ಟು ಆಕ್ರೋಶ ವ್ಯಕ್ತವಾಗಿ ಆತನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸ್ ಇಲಾಖೆಯನ್ನು ಒತ್ತಾಯ ಮಾಡಲಾಗಿ ದೂರು ಕೂಡ ದಾಖಲಾಗಿತ್ತು.

- Advertisement -

Related news

error: Content is protected !!