Wednesday, September 16, 2026
spot_imgspot_img
spot_imgspot_img

ಶ್ರೀಧಾಮ ಮಾಣಿಲ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

ಸೋಮವಾರ ನಡೆಯಿತು.

ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ ಭಗವಂತನ ಸೃಷ್ಟಿಗಳೆಲ್ಲವೂ ಅದ್ಭುತ. ನಿಸರ್ಗದ ಆಲೋಚನೆಯಲ್ಲಿ ತೊಡಗಿದಾಗ ನಮಗೆ ಮೊದಲು ತೋರುವುದು ಈ ಲೋಚನ. ಈ ಪ್ರಕೃತಿಯಲ್ಲಿ ಚಿಮ್ಮುವ ಚೆಲುವನ್ನು, ಚೈತನ್ಯವನ್ನೂ, ಕಾಣುವುದು ಈ ಲೋಚನ. ಇದಿಲ್ಲದೇ ಸುಖವಿಲ್ಲ. ಸುಖವಿಲ್ಲದ ಬರಡಾದ ಬದುಕು ಬೇಕಿಲ್ಲ. ಬಂಗಾರ ಬದುಕು ನಮ್ಮದಾಗಬೇಕು. ನಿರಂತರ ಭಗವಂತ ಸೇವೆಯಲ್ಲಿ ತೊಡಗಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ತಿಳಿಸಿದರು.

ಕರಿಂಜೆ ಲಕ್ಷ್ಮೀನಾರಾಯಣ ವೀರಾಂಜನೇಯ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಕ್ಷೇತ್ರದಲ್ಲಿ ಬೆಳಿಗ್ಗೆ ಚಂಡಿಕಾಯಾಗ, ಕನಕಧಾರಯಾಗ, ದತ್ತಾತ್ರೇಯಾಗ, ಗಣಪತಿ ಹೋಮ ನಡೆಯಿತು.


ಹೇಮಂತ್ ಮಾಧವ ನಾಯಕ್ ಪುಣೆ, ಟ್ರಸ್ಟಿಗಳಾದ ಭಾಸ್ಕರ್ ಶೆಟ್ಟಿ ಪುಣೆ, ಮಲ್ಲಿಕಾ ಶೆಟ್ಟಿ ಪುಣೆ, ಉದ್ಯಮಿ ಬರ್ಕೆ ಉಮೇಶ್ ಶೆಟ್ಟಿ, ಬಿಲ್ಡರ್ ಪುರುಷೋತ್ತಮ ಶೆಟ್ಟಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಡಿ ಶೆಟ್ಟಿ, ಟ್ರಸ್ಟಿ ಮಂಜು ವಿಟ್ಲ, ವನಿತಾ ವಿಠಲ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Related news

error: Content is protected !!