Saturday, June 6, 2026
spot_imgspot_img
spot_imgspot_img

ನಟ ದಿಗಂತ್​ಗೆ ಎರಡನೇ ಬಾರಿಗೆ ಸಿಸಿಬಿ ನೋಟೀಸ್

- Advertisement -
- Advertisement -

ಬೆಂಗಳೂರು: ಮಾದಕ ವಸ್ತು ಪ್ರಕರಣಕ್ಕೆ ಸಬಂಧಿಸಿದಂತೆ ಈಗಾಗಲೇ ಸ್ಟಾರ್​ ದಂಪತಿ ಐಂದ್ರಿತಾ ರೇ ಹಾಗೂ ದಿಗಂತ್​ ಅವರಿಗೆ ನೋಟಿಸ್​ ನೀಡಿ, ವಿಚಾರಣೆ ನಡೆಸಿದ್ದಾರೆ ಸಿಸಿಬಿ ಪೊಲೀಸರು. ಈ ಪ್ರಕರಣದಲ್ಲಿ ಒಮ್ಮೆ ವಿಚಾರಣೆಗೆ ಹಾಜರಾಗಿದ್ದ ಸೆಲೆಬ್ರಿಟಿ ದಂಪತಿಗಳಲ್ಲಿ ಒಬ್ಬರಿಗೆ ಮತ್ತೆ ನೋಟಿಸ್​ ನೀಡಲಾಗಿದೆ.

ಹೌದು, ನಟ ದಿಗಂತ್​ಗೆ ಎರಡನೇ ಬಾರಿಗೆ ಸಿಸಿಬಿ ನೋಟೀಸ್ ನೀಡಿದೆ. ಈ ಹಿಂದೆ ನಡೆಸಿದ ವಿಚಾರಣೆಯಲ್ಲಿ ದಿಗಂತ್​ ನೀಡಿರುವ ಹೇಳಿಕೆ ಆಧಾರದ ಮೇಲೆ ಮತ್ತೆ ಅವರಿಗೆ ನೋಟಿಸ್​ ನೀಡಲಾಗಿದ್ದು, ತನಿಖೆ ಮುಂದುವರೆಸುತ್ತಿದ್ದಾರೆ ಅಧಿಕಾರಿಗಳು.  ದಿಗಂತ್ ನೀಡಿದ್ದ ಮಾಹಿತಿ ಮೇರೆಗೆ ಡ್ರಗ್​ ಪೆಡ್ಲರ್​ಗಳ ವಿಚಾರಣೆಯೂ ನಡೆದಿತ್ತು. ಹಲವು ಕಡೆ ತೆರಳಿ ಸಿಸಿಬಿ ಪೊಲೀಸರು ತನಿಖೆ ನಡೆಸಿದ್ದರು. ಜೊತೆಗೆ ದಿಗಂತ್​  ಹಾಗೂ ಐಂದ್ರಿತಾ ಅವರ ಮೊಬೈಲ್​ನಲ್ಲಿದ್ದ ಮಾಹಿತಿಯನ್ನೂ ಕಲೆ ಹಾಕಿದ್ದರು. ಈ  ಎಲ್ಲ ಮಾಹಿತಿ ಆಧಾರದ ಮೇಲೆ ಈಗ ಮತ್ತೆ ದಿಗಂತ್​ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗುತ್ತಿದೆ. 


ದಿಗಂತ್​ ಹಾಗೂ ಐಂದ್ರಿತಾ ಹೊರದೇಶದಲ್ಲಿ ನಡೆದಿರುವ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿ ಹೋಗಿದ್ದಾಗಿಯೂ ಕೆಲವೊಂದು ಸಾಕ್ಷ್ಯಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿದೆಯಂತೆ. ‌ಇದರ ಜೊತಗೆ, ಈಗಾಗಲೇ ಬಂಧನವಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾ‌ ಸಹ ಇವರ ಬಗ್ಗೆ ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಎಲ್ಲರೂ ಸಾಕಷ್ಟು ಪಾರ್ಟಿಗಳಿಗೆ ಜೊತೆಯಲ್ಲಿಯೇ ಹೊಗುತ್ತುದ್ದೆವು ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

- Advertisement -

Related news

error: Content is protected !!