Saturday, April 20, 2024
spot_imgspot_img
spot_imgspot_img

ಜೂನ್ 1ರಿಂದ ಅಂಗವಿಕಲರಿಗೆ ಯುಡಿಐಡಿ ಪೋರ್ಟಲ್​ ಮೂಲಕ ಮಾತ್ರ ಪ್ರಮಾಣ ಪತ್ರ ವಿತರಣೆ

- Advertisement -G L Acharya panikkar
- Advertisement -

ನವದೆಹಲಿ: ಇನ್ನು ಮುಂದೆ ಎಲ್ಲ ಅಂಗವಿಕಲರಿಗೆ ಯುಡಿಐಡಿ ಮೂಲಕವೇ ಪ್ರಮಾಣಪತ್ರ ವಿತರಿಸುವುದನ್ನು ಭಾರತ ಸರ್ಕಾರದ ವಿಶೇಷಚೇತನ ವ್ಯಕ್ತಿಗಳ ಸಬಲೀಕರಣ ಇಲಾಖೆಯು (Department of Empowerment of Persons with Disabilities – DEPWD) ಕಡ್ಡಾಯಗೊಳಿಸಿದೆ.

ಜೂನ್ 1ರಿಂದ ಈ ಆದೇಶವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಡ್ಡಾಯವಾಗಿ ಜಾರಿಗೆ ಬರಬೇಕು ಎಂದು ಕೇಂದ್ರ ಸರ್ಕಾರವು ಗುರುವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಆರ್​ಪಿಡಬ್ಲ್ಯುಡಿ ಕಾಯ್ದೆ (2016) ಅನ್ವಯ ಕೇಂದ್ರ ಸರ್ಕಾರವು ಜಾರಿ ಮಾಡಿರುವ ವಿಶೇಷ ಚೇತನ ವ್ಯಕ್ತಿಗಳ ಹಕ್ಕು ನಿಯಮ 2017ರ ಪ್ರಕಾರ ಆನ್​ಲೈನ್ ವಿಧಾನದ ಮೂಲಕ ವಿಶೇಷಚೇತನರಿಗೆ ಪ್ರಮಾಣಪತ್ರಗಳನ್ನು ವಿತರಿಸುವುದನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ದಿನಾಂಕವನ್ನು ನಿಗದಿಪಡಿಸಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರ ನೇತೃತ್ವದ ಅಂಗವಿಕಲರ ಕೇಂದ್ರೀಯ ಸಲಹಾ ಮಂಡಳಿ ಕಳೆದ ನವೆಂಬರ್ 2020ರಂದು ನಡೆದ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಿತ್ತು. ಅಂಗವಿಕಲರಿಗೆ ಆನ್​ಲೈನ್ ಪ್ರಮಾಣಪತ್ರಗಳ ವಿತರಣೆಯನ್ನು ಏಪ್ರಿಲ್ 1ರಿಂದ ವಿತರಣೆಗೆ ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಿತ್ತು.

ಏಪ್ರಿಲ್ ತಿಂಗಳಲ್ಲಿ ಕೆಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಆನ್​ಲೈನ್ ಪ್ರಮಾಣಪತ್ರಗಳ ವಿತರಣೆಯನ್ನು ಜೂನ್ 1, 2021ರಿಂದ ಕಡ್ಡಾಯಗೊಳಿಸಲಾಗಿತ್ತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಇಲಾಖೆ ಹಾಗೂ ಅಂಗವಿಕಲರಿಗೆ ಸಂಬಂಧಿಸಿದ ವಿಚಾರಗಳನ್ನು ಗಮನಿಸುವ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಈ ಅಧಿಸೂಚನೆ ಜಾರಿಗೆ ಅಗತ್ಯಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಯುಡಿಐಡಿ ಯೋಜನೆಯು 2016ರಿಂದ ಜಾರಿಯಲ್ಲಿದೆ. ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಬಂಧಿಸಿದ ಅಧಿಕಾರಿಗಳಿಗೆ ಯುಡಿಐಡಿ ಪೋರ್ಟಲ್ (www.swavlambancard.gov.in) ಕಾರ್ಯದ ಬಗ್ಗೆ ಡಿಇಪಿಡಬ್ಲ್ಯೂಡಿಯಿಂದ ಅಗತ್ಯ ತರಬೇತಿಯನ್ನು ನೀಡಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆನ್ ಲೈನ್ ಪದ್ಧತಿಗೆ ವರ್ಗಾವಣೆಗೊಳ್ಳಲು ಅಗತ್ಯ ಸಮಯವನ್ನು ನೀಡಲಾಗಿತ್ತು.

ಜೂನ್ 1ರಿಂದ ಸಂಪೂರ್ಣವಾಗಿ ಡಿಜಿಟಲ್ ವಿಧಾನದಲ್ಲೇ ವಿಶೇಷಚೇತನರ ಪ್ರಮಾಣಪತ್ರವನ್ನು ನೀಡಬೇಕು ಎಂದು ಸೂಚಿಸಲಾಗಿದೆ. ಇದರಿಂದ ಭಾರತದಾದ್ಯಂತ ಎಲ್ಲೆಡೆ ಮಾನ್ಯವಾಗುವ ಪ್ರಮಾಣಪತ್ರಗಳ ನೈಜತೆ ಬಗ್ಗೆ ಪರಿಶೀಲನೆಗೆ ಸೂಕ್ತ ಕಾರ್ಯತಂತ್ರ ಲಭ್ಯವಾಗಲಿದೆ.

driving
- Advertisement -

Related news

error: Content is protected !!