Friday, May 3, 2024
spot_imgspot_img
spot_imgspot_img

ಇಡ್ಕಿದು ಗ್ರಾ.ಪಂ ವತಿಯಿಂದ 4 ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಪ್ರಿಂಟರ್‌ ವಿತರಣೆ

- Advertisement -G L Acharya panikkar
- Advertisement -
vtv vitla

ಇಡ್ಕಿದು: ಗ್ರಾಮಪಂಚಾಯತ್ ಅಮೃತ ಗ್ರಾಮ ಪಂಚಾಯತ್ ಯೋಜನೆಗೆ ಆಯ್ಕೆಯಾಗಿದ್ದು ಗ್ರಂಥಾಲಯವನ್ನು ನವೀಕರಿಸಿ ಡಿಜಿಟಲೀಕರಣ ಮಾಡಲಾಗಿದೆ. ಅಲ್ಲದೇ ಶಾಲೆಗಳಲ್ಲಿ ಗ್ರಂಥಾಲಯವು ಡಿಜಿಟಲ್ ಆಗಿ ನಿರ್ವಹಿಸಲು ಮತ್ತು ಅದರ ಪ್ರಯೋಜನವನ್ನು ಶಾಲೆಯ ವಿದ್ಯಾರ್ಥಿಗಳು ಪಡೆಯಬೇಕೆಂಬ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂರ್ಯ, ಮಿತ್ತೂರು, ಅಳಕೆಮಜಲು ಮತ್ತು ಓಜಾಳ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ಮತ್ತು ಪ್ರಿಂಟರ್‌ಗಳನ್ನು ಖರೀದಿಸಿ, ಶಾಲಾ ಮುಖ್ಯೋಪಾಧ್ಯಾಯರಿಗೆ ಹಸ್ತಾಂತರಿಸಿ ಸದುಪಯೋಗವನ್ನು ಪಡೆಯುವಂತೆ ಪಂಚಾಯತ್ ಅಧ್ಯಕ್ಷ ಎಂ.ಸುಧೀರ್‌ಕುಮಾರ್ ಶೆಟ್ಟಿಯವರು ತಿಳಿಸಿದರು.

ರ ಎಂ.ಸುಧೀರ್ ಕುಮಾರ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಡ್ಕಿದು ಗ್ರಾಮದ ಕೆದಿಮಾರಿ ಎಂಬಲ್ಲಿ ನಿರ್ಮಾಣವಾಗುತ್ತಿರುವ ರುದ್ರಭೂಮಿಯ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಯ್ತು. ಮಳೆಗಾಲ ಪ್ರಾರಂಭವಾಗಲು ಕೆಲವೇ ದಿನಗಳು ಬಾಕಿ ಇರುವುದರಿಂದ ತುರ್ತಾಗಿ ಅವಶ್ಯವಿರುವಲ್ಲಿ ಚರಂಡಿ ಮತ್ತು ಹೂಳು ತೆಗೆಯಲು ಗುತ್ತಿಗೆದಾರರಿಗೆ ಸೂಚಿಸಲಾಯ್ತು ಮತ್ತು ೨೩-೨೪ ನೇ ಸಾಲಿನ ಕ್ರಿಯಾ ಯೋಜನೆಯಲ್ಲಿ ಅನುದಾನ ಅಳವಡಿಸುವ ಬಗ್ಗೆ ಅನುಮೋದಿಸಲಾಯ್ತು. ಕ್ರಿಯಾ ಯೋಜನೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂ.ಉಪಾಧ್ಯಕ್ಷ ಯಶೋಧ, ಪಂ.ಸದಸ್ಯ ಚಿದಾನಂದ.ಪಿ, ರಮೇಶ ಪೂಜಾರಿ, ಸಂಜೀವ, ತಿಲಕ್‌ರಾಜ್ ಶೆಟ್ಟಿ, ಪದ್ಮನಾಭ, ಸಿದ್ದಿಕ್ ಆಲಿ ಪುರುಷೋತ್ತಮ, ಶೋಭಾ, ಭಾಗೀರಥಿ, ಪುಷ್ಪಾ, ಜಯಂತಿ, ಪ್ರಶಾಂತ್, ಹರಿಣಾಕ್ಷಿ, ಲಲಿತಾ, ಮೋಹಿನಿ, ಗೀತಾಂಜಲಿ ಉಪಸ್ಥಿತರಿದ್ದರು. ಪಂ.ಸಿಬ್ಬಂದಿ ಪೂರ್ಣಿಮಾ, ಭವ್ಯ, ಸಾವಿತ್ರಿ, ಸುನೀತಾ, ಲೆಕ್ಕಸಹಾಯಕಿ ರಾಜೇಶ್ವರಿ ಕಲಾಪದಲ್ಲಿ ಸಹಕರಿಸಿದರು.

ನಾಡಗೀತೆಯೊಂದಿಗೆ ಸಭೆಯನ್ನು ಪ್ರಾರಂಭಿಸಿ ಪಂಚಾಯತ್ ಅಭಿವೃಧ್ಧಿ ಅಧಿಕಾರಿ ಗೋಕುಲ್‌ದಾಸ್ ಭಕ್ತ ಸ್ವಾಗತಿಸಿ ಧನ್ಯವಾದ ನೀಡಿದರು. ರಾಷ್ಟ್ರಗೀತೆಯೊಂದಿಗೆ ಸಭೆಯನ್ನು ಮುಕ್ತಾಯ ಮಾಡಲಾಯ್ತು.

- Advertisement -

Related news

error: Content is protected !!