ಅಸಾಹಯಕರ ಪಾಲನ ಕೇಂದ್ರ, ಆನಂದಾಶ್ರಮ ಹಾಗೂ ರಾಮಕೃಷ್ಣ ಸೇವಾ ಆಶ್ರಮಕ್ಕೆ ಪುತ್ತೂರು ಕ್ಲಬ್‌ನ ವತಿಯಿಂದ ಧನ ಸಹಾಯ

ಪುತ್ತೂರು ಲಯನ್ಸ್ ಕ್ಲಬ್‌ಗೆ ಡಿಸ್ಟಿಕ್ ಗವರ್ನರ್ ಕುಡ್ಪಿ ಅರವಿಂದ ಶೆಣೈ ಅವರು ಅಧಿಕೃತ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮುರದಲ್ಲಿರುವ ಅಸಾಹಯಕರ ಪಾಲನ ಕೇಂದ್ರ ಶಿವಸದನ ಮತ್ತು ಪುತ್ತೂರು ಮುಕ್ರಂಬಾಡಿಯಲ್ಲಿರುವ ಆನಂದಾಶ್ರಮ ಹಾಗೂ ರಾಮಕೃಷ್ಣ ಸೇವಾ ಆಶ್ರಮಕ್ಕೆ ಗವರ್ನರ್ ಅವರೊಂದಿಗೆ ಭೇಟಿ ನೀಡಿ ಪುತ್ತೂರು ಕ್ಲಬ್‌ನ ವತಿಯಿಂದ ಧನ ಸಹಾಯ ಹಾಗೂ ಅಗತ್ಯ ವಸ್ತುಗಳನ್ನು ನೀಡಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಪ್ರೇಮಲತಾ ರಾವ್ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಸೇವಾ ಕಾರ್ಯಕ್ರಮದ ಅಂಗವಾಗಿ ಬಪ್ಪಳಿಗೆ ಅಂಗನವಾಡಿಗೆ ಆಟಿಕೆ ಸಾಮಾನು ಸುರೇಖಾ ಅವರಿಗೆ ಫುಡ್ ಕಿಟ್ ನೀಡಲಾಯಿತು. ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ನಾಲ್ಕು ಮಹಿಳೆಯರನ್ನು ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಗಾಂಧಾರಿ ಕಲೆಯಲ್ಲಿ ಪರಿಣಿತರಾದ ಶಮಿಕ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ NSS ಮತ್ತು ರೆಂಜರ್ಸ್‌ನ 8 ವಿದ್ಯಾರ್ಥಿಗಳನ್ನು ಮತ್ತು ಅವರ ಶಿಕ್ಷಕರನ್ನು ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ರೀಜನಲ್ ಕಾನ್ಫರೆನ್ಸ್ ಅಂಶು ಇದರ ಲೋಗೋ ಮತ್ತು ಆಮಂತ್ರಣ ಪತ್ರಿಕೆಯನ್ನು ಗವರ್ನರ್ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಂಪುಟ ಜೊತೆ ಕಾರ್ಯದರ್ಶಿ ಚಂದ್ರಹಾಸ ರೈ, ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, PRO ಸುದರ್ಶನ್ ಪಡಿಯಾರ್, RC ಆನಂದ ರೈ, ZC ಜೆಸಿಂತಾ ಮಸ್ಕರೇನಸ್ ಉಪಸ್ಥಿತರಿದ್ದರು. ಕ್ಲಬ್ ಕಾರ್ಯದರ್ಶಿ ಅರವಿಂದ ಭಗವಾನ್ ರೈ ಎಪ್ರಿಷಿಯೇಶನ್ ಲೆಟರ್ ವಾಚಿಸಿ, ಕೋಶಾಧಿಕಾರಿ ಸುಧಾಕರ್ ಕೆ ಪಿ ಧನ್ಯವಾದಗೈದರು.








