ಬಂಟ್ವಾಳ ತಾಲೂಕು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಚಂದಳಿಕೆಯ ಯುವಕೇಸರಿ ಅಬೀರಿ- ಅತಿಕಾರಬೈಲು (ರಿ ) ಸಂಘಟನೆಗೆ 2024-25 ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಗೊಂಡಿದೆ.
ಈ ಸಂಘಟನೆಯು ಹಲವಾರು ವರ್ಷಗಳಿಂದ ಪ್ರತಿ ತಿಂಗಳಿನಲ್ಲಿ ತೀರಾ ಬಡತನದಲ್ಲಿರುವ ಅನಾರೋಗ್ಯ ಪೀಡಿತರಿಗೆ ರೂಪಾಯಿ 10,000 ಮತ್ತು 26 ರಿಂದ 52 ಕೆ. ಜಿ ಅಕ್ಕಿಯನ್ನು ನೀಡುತ್ತಾ ಬಂದಿದ್ದಾರೆ. ಅಲ್ಲದೇ ಸತತವಾಗಿ ತುರ್ತು ಸಂದರ್ಭದಲ್ಲಿ ಹಲವಾರು ಜನರಿಗೆ ರಕ್ತದಾನ ಪೂರೈಕೆ. ಚಂದಳಿಕೆ ಅಸುಪಾಸಿನ ಎಲ್ಲಾ ರಸ್ತೆಯ ಸ್ವಚ್ಛತಾ ಕಾರ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ, ಉದ್ಯೋಗ ಮಾಹಿತಿಗಳು ಮತ್ತು ಹಲವು ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಚಂದಳಿಕೆ ಜಂಕ್ಷನ್ ಬಳಿ 50,000 ವೆಚ್ಚದ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದಾರೆ. ಮಡಿಕೇರಿಯ ಪ್ರವಾಹ ಸಂಧರ್ಭದಲ್ಲಿ 15 ಜನರ ತಂಡ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ 20,000 ಮೌಲ್ಯದ ದಿನಸಿ ಸಾಮಗ್ರಿಗಳನ್ನು ನೀಡಿದ್ದಾರೆ.
ಯುವಕೇಸರಿ ಸಂಘಟನೆಯು 10 ವರ್ಷಗಳ ಹಿಂದೆ ಆರಂಭಗೊಂಡು ಕಾನೂನಿನ ಚೌಕಟ್ಟಿನಲ್ಲಿ ನೋಂದಾವಣೆಗೊಂಡಿದ್ದು 50 ಕ್ಕಿಂತ ಹೆಚ್ಚು ಸದಸ್ಯರನ್ನು ಒಳಗೊಂಡು ಪ್ರಸ್ತುತವಾಗಿ ಗೌರವ ಅಧ್ಯಕ್ಷರಾಗಿ ದಯಾನಂದ ಶೆಟ್ಟಿ ಉಜಿರೆಮಾರು, ಅಧ್ಯಕ್ಷರಾಗಿ ವನಿತ್ ಮಡಿವಾಳ ಅಬೀರಿ , ಕಾರ್ಯದರ್ಶಿಯಾಗಿ ಬಾಲಕೃಷ್ಣ ಪೂಜಾರಿ ಪಟ್ಲ ಇವರುಗಳು ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿ ವಿಠಲ ಪೂಜಾರಿ ಅತಿಕಾರಬೈಲು, ಚಂದ್ರಹಾಸ ಕುಲಾಲ್ ಅಬೀರಿ, ಪದ್ಮನಾಭ ಶೆಟ್ಟಿ ಚಪುಡಿಯಡ್ಕ, ಸುಶಾಂತ್ ಸಾಲಿಯಾನ್ ಚಂದಳಿಕೆ, ದಿವಾಕರ ಶೆಟ್ಟಿ ಅಬೀರಿ, ಗಂಗಾಧರ ಪೂಜಾರಿ ಪರಣೀರು, ಚಿದಾನಂದ ಶೆಟ್ಟಿ ಉಜಿರೆಮಾರು, ಗಣೇಶ್ ಪೂಜಾರಿ ಪಟ್ಲ ಮತ್ತು ಯೋಗೀಶ್ ಕೇಪುಳಗುಡ್ಡೆ ಇವರುಗಳು ಸೇವೆಯನ್ನು ಸಲ್ಲಿಸಿರುತ್ತಾರೆ. ಈ ಸಂಘಟನೆಯು 7,60,000 ರೂ ಮತ್ತು 1700 ಕೆ. ಜಿ ಅಕ್ಕಿಯನ್ನು ವಿತರಣೆ ಮಾಡಿರುತ್ತಾರೆ.