Monday, May 6, 2024
spot_imgspot_img
spot_imgspot_img

ಅಡ್ಯನಡ್ಕ: ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ರಿಷ್ಯಂತ್ ಭೇಟಿ

- Advertisement -G L Acharya panikkar
- Advertisement -

ಸ್ಥಳಕ್ಕೆ ದೌಡಾಯಿಸಿದ ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ: ಚುರುಕುಗೊಂಡ ತನಿಖೆ

ಅಡ್ಯನಡ್ಕ: ವಿಟ್ಲ ಸಮೀಪದ ಅಡ್ಯನಡ್ಕ ಎಂಬಲ್ಲಿನ ಕರ್ನಾಟಕ ಬ್ಯಾಂಕ್‌ಗೆ ನಿನ್ನೆ ರಾತ್ರಿ ದರೋಡೆಕೋರರು ಒಳನುಗ್ಗಿದ್ದು, ಇಂದು ಮುಂಜಾನೆ ಎಂದಿನಂತೆ ಬ್ಯಾಂಕ್ ಸಿಬ್ಬಂದಿ ಬ್ಯಾಂಕ್ ತೆರೆದು ಓಳಗೆ ಹೋದಾಗ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ತನಿಖೆ ನಡೆಸಿದ್ದಾರೆ. ಹೆಚ್ಚಿನ ಪರಿಶೀಲನೆಗಾಗಿ ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿದ್ದು ತನಿಖೆ ಮುಂದುವರಿದಿದೆ. ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ರಿಷ್ಯಂತ್ ಭೇಟಿ ನೀಡಿದ್ದು, ತನಿಖೆ ಚುರುಕುಗೊಂಡಿದೆ.

ಘಟನೆ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ರಿಷ್ಯಂತ್ ಮಾತನಾಡಿ ’ನಿನ್ನೆ ದಿನ ರಾತ್ರಿ ವಿಟ್ಲ ಸಮೀಪದ ಅಡ್ಯನಡ್ಕ ಎಂಬಲ್ಲಿ ಕರ್ನಾಟಕ ಬ್ಯಾಂಕ್‌ನಲ್ಲಿ ಲಾಕರ್‌ ಮುರಿದು ಕಳ್ಳತನವಾಗಿದೆ. ಇದೀಗ ವಿಧಿವಿಧಾನ ತಜ್ಞರು ತನಿಖೆ ಮುಂದುವರೆಸಿದ್ದಾರೆ. ಬ್ಯಾಂಕಿನ ಭದ್ರತಾ ಸಿಸ್ಟಮ್‌ ತುಂಬಾ ದುರ್ಬಲವಾಗಿದೆ. ಲಾಕರ್‌ ಫೆಸಿಲಿಟಿಗಳೆಲ್ಲವೂ ತುಂಬಾ ಭದ್ರವಾಗಿರಬೇಕು. ಇದಕ್ಕೆ ಬೇಕಾದಂತಹ ಎಲ್ಲಾ ವ್ಯವಸ್ಥೆಗಳನ್ನು ಎಲ್ಲಾ ಬ್ಯಾಂಕ್‌ಗಳು ಮಾಡಬೇಕು. ಬ್ಯಾಂಕಿನ ಹಿಂದಿನ ಕಿಟಕಿಯ ರಾಡನ್ನು ಎಕ್ಸೆರ್‍ ಬ್ಲೇಡ್ ಮೂಲಕ ಮುರಿದು ಒಳನುಗ್ಗಿದ ದರೋಡೆಕೋರರು ಬ್ಯಾಂಕ್‌ನ ಲಾಕರ್‌ನ್ನು ಗ್ಯಾಸ್‌ ಕಟ್ಟರ್‌ ಉಪಯೋಗಿಸಿ ಲಾಕರ್‌ ಮುರಿದಿದ್ದಾರೆ ಎಂದು ಹೇಳಿದರು. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಚ್ಚಿ ಬೀಳುವಂತ ಘಟನೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಅತೀ ದೊಡ್ಡ ರಾಬರಿ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

- Advertisement -

Related news

error: Content is protected !!