Friday, March 29, 2024
spot_imgspot_img
spot_imgspot_img

ವೈದ್ಯರ ದಿನದಂದೇ ವೈದ್ಯ ದಂಪತಿಗಳು ನೇಣಿಗೆ ಶರಣು; ಮದುವೆಯಾಗಿ ಇನ್ನೂ ತಿಂಗಳು ಕಳೆದಿಲ್ಲ..!

- Advertisement -G L Acharya panikkar
- Advertisement -

ಮುಂಬೈ: ಇಂದು ರಾಷ್ಟ್ರೀಯ ವೈದ್ಯರ ದಿನ. ಆದರೆ ಇಲ್ಲೊಂದು ವೈದ್ಯ ದಂಪತಿ ಮಾತ್ರ ತಮ್ಮ ಜೀವನವನ್ನೇ ಇದೇ ದಿನದಂದು ಅಂತ್ಯಗೊಳಿಸಿದ್ದಾರೆ. ಮದುವೆಯಾಗಿ ಒಂದು ತಿಂಗಳಲ್ಲೇ ದಾಂಪತ್ಯ ಜೀವನಕ್ಕೆ ಚುಕ್ಕಿ ಬಿದ್ದು ಮಣ್ಣಾಗಿದ್ದಾರೆ.

ಮಹಾರಾಷ್ಟ್ರದ ಪುಣೆಯ ಅಂಕಿತಾ (26) ಹಾಗೂ ಆಕೆಯ ಪತಿ ನಿಖಿಲ್ ಶೆಂಡ್ಕರ್ (28) ಮೃತ ದುರ್ದೈವಿಗಳು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಒಂದು ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಮದುವೆಯಾದಾಗಿನಿಂದಲೂ ಅವರಿಬ್ಬರ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಆಗುತ್ತಿತ್ತಂತೆ. ಪ್ರತಿ ದಿನ ಒಂದಿಲ್ಲೊಂದು ವಿಚಾರದಲ್ಲಿ ದಂಪತಿ ಜಗಳ ಆಡಿಕೊಳ್ಳುತ್ತಿದ್ದರಂತೆ.

ನಿನ್ನೆ ನಿಖಿಲ್ ಕೆಲಸ ಮುಗಿಸಿ ಮನೆಗೆ ಬಂದು ಯಾರೊಂದಿಗೋ ಫೋನ್‌ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಮತ್ತೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಜಗಳ ತಾರಕಕ್ಕೇರಿದ್ದು, ಅಂಕಿತಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಅದಾದ ಸ್ವಲ್ಪ ಹೊತ್ತಿನಲ್ಲಿ ನಿಖಿಲ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು, ಪರಿಶೀಲನೆ ನಡೆಸಿ, ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅದಾದ ನಂತರ ದೇಹಗಳನ್ನು ಅಂತ್ಯಸಂಸ್ಕಾರ ಮಾಡಲು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!