Sunday, June 7, 2026
spot_imgspot_img
spot_imgspot_img

ನಾಯಿ ದಾಳಿಯಿಂದ ರಕ್ಷಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದ ಅಮೆಜಾನ್‌ ಡೆಲಿವರಿ ಏಜೆಂಟ್‌

- Advertisement -
- Advertisement -

ನಾಯಿ ದಾಳಿಯಿಂದ ರಕ್ಷಿಸಿಕೊಳ್ಳಲು ಅಮೆಜಾನ್‌ ಡೆಲಿವರಿ ಏಜೆಂಟ್‌ವೊಬ್ಬರು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಗಾಯಗೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಣಿಕೊಂಡದ ಪಂಚವಟಿ ಕಾಲೋನಿ ಎಂಬಲ್ಲಿ ಈ ಘಟನೆ ನಡೆದಿದೆ. ಮೊಹಮ್ಮದ್ ಇಲ್ಯಾಸ್ (27) ಗಾಯಗೊಂಡವರು. ಅಮೆಜಾನ್‌ನಲ್ಲಿ ಅವರು ಡೆಲಿವರಿ ಏಜೆಂಟ್‌ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಡೆಲವರಿ ತಲುಪಿಸುವ ಸಲುವಾಗಿ ಗ್ರಾಹಕರೊಬ್ಬರ ಮನೆಗೆ ಹೋದ ಸಮಯದಲ್ಲಿ ಇಲ್ಯಾಸ್ ಮೇಲೆ ಸಾಕು ನಾಯಿ ಲ್ಯಾಬ್ರಡಾರ್ ದಾಳಿ ಮಾಡಿದೆ. ಭಯಭೀತರಾದ ಇಲ್ಯಾಸ್‌ ಮೂರನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಟ್ಟಡದ ಪಕ್ಕದ ಗೋಡೆಯ ಮೇಲೆ ಬಿದ್ದ ಇಲ್ಯಾಸ್‌ಗೆ ಮೂಳೆ ಮುರಿತಗಳು ಉಂಟಾಗಿವೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಲ್ಯಾಸ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಇಲ್ಯಾಸ್ ಹೇಳಿಕೆ ಪಡೆದುಕೊಂಡು, ಮನೆ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಯದುರ್ಗ ಪೊಲೀಸರು ಹೇಳಿದ್ದಾರೆ.

- Advertisement -

Related news

error: Content is protected !!