Sunday, November 10, 2024
spot_imgspot_img
spot_imgspot_img

ಇಂದು ಡಾ.ಅಬ್ದುಲ್ ಕಲಾಂ ಅವರ ಪುಣ್ಯತಿಥಿ: ಗಣ್ಯರಿಂದ ಗೌರವ ನಮನ ಸಲ್ಲಿಕೆ

- Advertisement -
- Advertisement -

ನವದೆಹಲಿ: ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರು ವಿಜ್ಞಾನ ,ರಾಜಕೀಯದ ಬಗ್ಗೆ ಅಳಿಸಲಾಗದ ಗುರುತುಗಳನ್ನು ಬಿಟ್ಟುಹೋಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಟ್ವೀಟ್ ಮಾಡಿದ್ದಾರೆ.

ಇಂದು ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿ. ಹೀಗಾಗಿ ಅವರಿಗೆ ಗೌರವ ಸಲ್ಲಿಸಿದ ಅಮಿತ್ ಷಾ, ಬುದ್ಧಿಶಕ್ತಿ, ಸರಳತೆಯ ಸಾರಾಂಶವಾದ ಡಾ.ಕಲಾಂ ಅವರಿಗೆ ನನ್ನ ನಮನಗಳು. ಕಲಾಂ ಅವರ ಜ್ಞಾನದ ಅನ್ವೇಷಣೆಯು ಸ್ವಾವಲಂಬಿ ಭಾರತದ ಕಲ್ಪನೆಯನ್ನು ಪ್ರೇರೇಪಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಟ್ವೀಟ್ ಮಾಡಿದ್ದು, ಇಂದು ಮಾಜಿ ರಾಷ್ಟ್ರಪತಿ ದಿ.ಡಾ.ಅಬ್ದುಲ್ ಕಲಾಂ ಅವರ ಪುಣ್ಯತಿಥಿ ಆಗಿದ್ದು, ಅವರಿಗೆ ನನ್ನ ಗೌರವ ವಂದನೆ ಸಲ್ಲಿಸುತ್ತೇನೆ. ಅವರ ಆದರ್ಶ ಜೀವನವು ದೇಶದ ಜನರಿಗೆ ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.

- Advertisement -

Related news

error: Content is protected !!