Thursday, June 30, 2022
spot_imgspot_img
spot_imgspot_img

“ಸಲೀಸಾಗಿ ದೇಶ ವಿದೇಶಗಳನ್ನು ಸುತ್ತುವ ಡಾಕ್ಟರ್ ಬ್ರೋ” ಈತನ ಅಸಲಿ ಕಥೆ ಇಲ್ಲಿದೆ.!?

- Advertisement -
- Advertisement -

ಸಾಮಾನ್ಯವಾಗಿ ಜೀವನದಲ್ಲಿ ಸಾಧಿಸುವ ಛಲ ಇದ್ದರೆ ಸಾಕು ಜೀವನವನ್ನು ಹೇಗೆ ಬೇಕಾದರೂ ಕೂಡ ಸಾಗಿಸಬಹುದಾಗಿದೆ. ಹೆಚ್ಚಿನ ಮಂದಿ ಜೀವನದಲ್ಲಿ ಯಶಸ್ಸಿನ ಹಾಗೂ ಹಣದ ಆಸೆಯಿಂದ ಅಡ್ಡದಾರಿ ಹಿಡಿಯುತ್ತಾರೆ. ಅದರಿಂದ ಗಳಿಸಿರುವ ನೇಮ್ – ಫೇಮ್ ಏನೇ ಇದ್ದರೂ ಸ್ವಲ್ಪ‌ ಸಮಯ ಅಷ್ಟೇ. ಆದರೆ ಯಾರು ಕಷ್ಟ ಪಟ್ಟು ನ್ಯಾಯದ ಹಾದಿಯಲ್ಲಿ ದುಡಿಯುತ್ತಾರೋ ಅವರು ಯಶಸ್ಸನ್ನು ಗಳಿಸುತ್ತಾರೆ ಹಾಗೂ ಅದೇ ರೀತಿ ಜಗತ್ತಿನಲ್ಲಿ ಗುರುತಿಸಿಕೊಳ್ಳುತ್ತಾರೆ ಎಂಬುದು ವಾಸ್ತವ.

ಸಾಧನೆ ಮಾಡಲು ಹೆಸರು ಗಳಿಸಲು ಅವರು ವಯಸ್ಸಿನಲ್ಲಿ ಹಿರಿಯರಾಗಿರಬೇಕು ಅಂತೇನಿಲ್ಲ ಹಾಗೂ ಅವರಿಗೆ ಅನುಭವವೇ ಬೇಕು ಅಂತೇನಿಲ್ಲ. ಏನಾದರೂ ಸಾಧನೆ ಮಾಡಬೇಕು ಅನ್ನುವ ಛಲ ಇದ್ದರೆ ಸಾಕು. ಇದಕ್ಕೆ ಬೆಸ್ಟ್ ಉದಾಹರಣೆ ಸೋಶಿಯಲ್ ಮೀಡಿಯಾಗಳಲ್ಲಿ ಹವಾ ಕ್ರಿಯೇಟ್ ಮಾಡಿರುವ ಡಾ ಬ್ರೋ. ಯೂ ಟ್ಯೂಬ್ ನೋಡುವವರಿಗೆ ಸೋಶಿಯಲ್ ಮೀಡಿಯಾ ಆಸಕ್ತರಿಗೆ ಡಾ ಬ್ರೋ ಗೊತ್ತಿರಲೇ ಬೇಕು. ಸಣ್ಣ ವಯಸ್ಸಿಗೇ ದೇಶ ವಿದೇಶ ಸುತ್ತುವ ಈತ ಎಲ್ಲರಿಗೂ ಕೂಡ ಅಚ್ಚರಿ ಮೂಡಿಸಿದ್ದಾನೆ.

ಈತ ಯಾರು? ಎಲ್ಲಿಯವನು? ಅಷ್ಟೊಂದು ಶ್ರೀಮಂತನಾ? ಈತನಿಗೆ ಯಾರ ಬೆಂಬಲ ಇದೆ? ಅಂತೆಲ್ಲಾ ಅನೇಕರ ಮನದಲ್ಲಿ ಪ್ರಶ್ನೆ ಮೂಡಿದ್ದರೆ ಅದರಲ್ಲಿ ಅಚ್ಚರಿ ಏನಿಲ್ಲ. ಯಾಕಂದರೆ ಇಷ್ಟು ಸಣ್ಣ ವಯಸ್ಸಿನಲ್ಲಿ ಈ ರೀತಿ‌ ಊರೂರು ದೇಶ ವಿದೇಶ ಸುತ್ತುವುದು ಅಂದರೆ ಅದು ಸಾಮಾನ್ಯದ ವಿಷಯ ಅಲ್ಲ. ಈತನ ಹೆಸರು ಗಗನ್. ಮೂಲತಃ ಬೆಂಗಳೂರಿನ ಹೊರವಲಯದಲ್ಲಿ ಹುಟ್ಟಿ ಬೆಳೆದವನು. ಈತ ಹುಟ್ಟಿದ್ದು ಮದ್ಯಮ‌ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ.

ತಂದೆ ಶ್ರೀನಿವಾಸ್ ರವರು ದೇವಸ್ಥಾನದ ಅರ್ಚಕರಾಗಿ ಕೆಲಸ ಮಾಡುತ್ತಾರೆ. ತಾಯಿ ಪದ್ಮಾ ಮನೆಯ ಕೆಲಸ ನೋಡಿಕೊಳ್ಳುತ್ತಿದ್ದು ಈ ಗಗನ್ ಎರಡನೆ ತರಗತಿಯಲ್ಲಿ ಓದುತ್ತಿರುವಾಗಲೇ ಪೌರೋಹಿತ್ಯ ಕಲಿತಿದ್ದ. ‌ ತಂದೆ ಇಲ್ಲದ ಸಮಯದಲ್ಲಿ ತಾನೇ ದೇವಸ್ಥಾನದ ಪೂಜೆ ಮಾಡುತ್ತಿದ್ದ.‌ ಇನ್ನು ಶಾಲೆಗೆ ಹೋಗುತ್ತಿದ್ದರೂ ಗಗನ್ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿಂದೆಯೇ ಇದ್ದ.‌ ಅವನಿಗೆ ಓದಿನಲ್ಲಿ ಯಾವುದೇ ಇಂಟ್ರೆಸ್ಟ್ ಇರಲಿಲ್ಲ ಆದರೆ ಹಾಡು ನೃತ್ಯ ನಾಟಕ ನಿರೂಪಣೆ ಇಂತಹದರಲ್ಲಿ ಸದಾ ಮುಂದಿದ್ದ. ಎಸ್ ಎಸ್ ಎಲ್ ಸಿ‌‌ ಪಾಸಾಗಿ ಸೈನ್ಸ್ ತೆಗೆದುಕೊಂಡು ಅದರಲ್ಲಿ ಅನುತ್ತೀರ್ಣಗೊಂಡಿದ್ದು ಇನ್ನು ತಾನು ಜೀವನದಲ್ಲಿ ತನ್ನ ಕಾಲ ಮೇಲೆ ನಿಂತುಕೊಳ್ಳಬೇಕು ಎಂದು ಬ್ರಾಹ್ಮಣ ‌ಸ್ಟೋರ್ಸ್ ಇಟ್ಟುಕೊಂಡಿದ್ದ. ಲೈಸೆನ್ಸ್ ಇಲ್ಲದೇ ಹೋದರೂ ತನ್ನ ಹದಿನಾರನೆ ವಯಸ್ಸಿಗೆ ‌ಕಾರು ಓಡಿಸಲು ಶುರು ಮಾಡಿದ್ದ ಆದರೆ ಇದು ಯಾವುದೂ ಗಗನ್ ಗೆ ಮಾನಸಿಕ ನೆಮ್ಮದಿ ಕೊಟ್ಟಿರಲಿಲ್ಲ. ಭರತನಾಟ್ಯ ಕಲಿತು ಅದರ ಕ್ಲಾಸ್‌ ನಡೆಸಿದ್ದ ಫೋಟೋಗ್ರಫಿ ವಿಡಿಯೂ ಗ್ರಫಿ ಕೂಡ ಕಲಿತ.

ಇನ್ನು 2016 ರಲ್ಲಿ ತನ್ನದೇ ಆದ ಯೂ ಟ್ಯೂಬ್‌ ಚಾನೆಲ್ ಶುರು ಮಾಡಿ ಅದುವೇ ಡಿ ಆರ್ ಬ್ರೋ ಅಂದರೆ ಡಾ ಬ್ರೋ. ಪ್ರಾರಂಭದಲ್ಲಿ ಕಾಮೆಡಿ ವಿಡಿಯೋವನ್ನು ಮಾಡಿ ಅಪ್ಲೋಡ್ ಮಾಡಿ ಬರು ಬರುತ್ತಾ ಸಿನಿಮಾ ನಟ ನಟಿಯರ ಇಂಟರ್ವ್ಯೂ ಮಾಡಿ ಹಾಕುತ್ತಿದ್ದ. ಆದರೆ ಇದು ಮಾಡಿದರೆ ಸಾಲದು ಅನ್ನುವ ಭಾವನೆ ಆತನಲ್ಲಿ ಇದ್ದು ಅದಕ್ಕಾಗಿ ‌ರಾಜ್ಯದ ಬೇರೆ ಬೇರೆ ಕಡೆ ಸುತ್ತಾಡಿ ಅಲ್ಲಿನ‌ ವಿವರ ಕೊಡಲು ಶುರುಮಾಡಿದ್ದ. ರಾಜ್ಯ ಹೋಗಿ ಅಂತರಾಜ್ಯ ನಂತರ ದೇಶ ವಿದೇಶ ಸುತ್ತಿದ್ದ. ಪಾಕಿಸ್ತಾನ ರಷ್ಯಾಕ್ಕೂ ಹೋಗಿದ್ದ. ಸರಿಯಾಗಿ ಹಿಂದಿ ಇಂಗ್ಲೀಷ್ ಬಾರದೇ ಹೋದರೂ ತನ್ನ 22 ನೇ ವಯಸ್ಸಿಗೇ ಪೂರ್ತಿ ದೇಶ ಸುತ್ತಿರುವ‌ ಖ್ಯಾತಿ ಅವನದ್ದು. ಆದರೆ ಇಷ್ಟೆಲ್ಲಾ ಮಾಡಲು ಗಗನ್‌ ಒಂದೇ ಒಂದು ರೂಪಾಯಿ ತನ್ನ‌ ಹೆತ್ತವರಿಂದಾಗಲಿ ಇನ್ಯಾರ ಬಳಿಯಿಂದಲೂ ಪಡೆದಿಲ್ಲ. ಹೌದು ತಾನೇ ದುಡಿದ ಹಣದಿಂದ ಈ ಸಾಧನೆ ಮಾಡಿರುವ ಗಗನ್ ಅಲಿಯಾಸ್ ಡಾ ಬ್ರೋ ಎಲ್ಲರಿಗೂ ಮಾದರಿ.

- Advertisement -

Related news

error: Content is protected !!