Wednesday, April 24, 2024
spot_imgspot_img
spot_imgspot_img

ಗುಜರಾತ್ ಸರ್ಕಾರದಿಂದ ‘ಕಮಲಂ’ ಆದ ‘ಡ್ರ್ಯಾಗನ್‌ ಫ್ರೂಟ್’!

- Advertisement -G L Acharya panikkar
- Advertisement -

ಗುಜರಾತ್: ಗುಜರಾತ್‌ ಸರ್ಕಾರವು ಡ್ರ್ಯಾಗನ್‌ ಫ್ರೂಟ್‌‌ಗೆ ‘ಕಮಲಂ’ ಎಂಬ ಹೆಸರು ನೀಡಿದೆ. ಹಣ್ಣಿನ ಹೊರಭಾಗವು ಕಮಲದ ಆಕಾರಕ್ಕೆ ಹೋಲಿಕೆಯಾಗುವುದರಿಂದ ರಾಜ್ಯ ಸರ್ಕಾರವು ಹೆಸರು ಬದಲಿಸಲು ನಿರ್ಧರಿಸಿದೆ ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್ ರುಪಾಣಿ ಹೇಳಿದ್ದಾರೆ.

‘ಡ್ರ್ಯಾಗನ್‌ ಫ್ರೂಟ್‌‌’ ಹೆಸರು ಚೀನಾದೊಂದಿಗೆ ಬೆಸೆದುಕೊಂಡಿರುವುದರಿಂದ ಹೆಸರು ಬದಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ದಕ್ಷಿಣ ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಹಣ್ಣನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಸಂಸ್ಕೃತದಲ್ಲಿ ‘ಕಮಲಂ’ ಎಂದರೆ ತಾವರೆ (ಕಮಲ) ಎಂಬ ಅರ್ಥವಿದೆ. ಉಷ್ಣವಲಯದಲ್ಲಿ ಬೆಳೆಯುವ ಹಣ್ಣು ಡ್ರ್ಯಾಗನ್‌ ಫ್ರೂಟ್‌‌, ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆದಿದೆ. ಅದರ ಭಿನ್ನ ಆಕಾರ ಮತ್ತು ರುಚಿ ಜನರ ಗಮನ ಸೆಳೆದಿದೆ.’ಡ್ರ್ಯಾಗನ್‌ ಫ್ರೂಟ್‌‌ನ ಹೆಸರು ಬದಲಿಸಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ಹಣ್ಣಿನ ಹೊರ ಪದರವು ಕಮಲವನ್ನು ಹೋಲುತ್ತದೆ, ಹಾಗಾಗಿ ಆ ಹಣ್ಣಿಗೆ ಕಮಲಂ ಎಂದು ಕರೆಯಲಾಗುತ್ತದೆ’ ಎಂದು ಸಿಎಂ ವಿಜಯ್ ರುಪಾಣಿ ಹೇಳಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!