Sunday, May 5, 2024
spot_imgspot_img
spot_imgspot_img

ಟ್ಯಾಂಕ್​ ನಾಶಕ ಕ್ಷಿಪಣಿ ಪ್ರಯೋಗ ಯಶಸ್ವಿ; ಭೂಸೇನೆಯ ಬತ್ತಳಿಕೆಗೆ ಮತ್ತೊಂದು ಅಸ್ತ್ರ

- Advertisement -G L Acharya panikkar
- Advertisement -

ನವದೆಹಲಿ: ಕಡಿಮೆ ಅಂತರದಲ್ಲಿರುವ ಟ್ಯಾಂಕ್​ಗಳನ್ನು ನಾಶಪಡಿಸುವ, ಸೈನಿಕರು ಹೊತ್ತೊಯ್ಯಬಲ್ಲ ಕ್ಷಿಪಣಿ ಉಡಾವಣಾ ಉಪಕರಣಗಳಿಂದ ಹಾರಿಬಿಡಬಹುದಾದ ಗೈಡೆಡ್ ಕ್ಷಿಪಣಿಯನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬುಧವಾರ ಯಶಸ್ವಿಯಾಗಿ ಪ್ರಯೋಗಿಸಿತು. ಇಂಥದ್ದೊಂದು ಸುಧಾರಿತ ಹಾಗೂ ಹಗುರ ಟ್ಯಾಂಕ್​ ನಾಶಕ ಕ್ಷಿಪಣಿ ಬೇಕೆಂದು ಭಾರತೀಯ ಸೇನೆಯು ಹಲವು ವರ್ಷಗಳಿಂದ ಬೇಡಿಕೆಯಿಟ್ಟಿತ್ತು.

ಟ್ಯಾಂಕ್​ ಒಂದರ ಪ್ರತಿಕೃತಿಯನ್ನು ಕನಿಷ್ಠ ರೇಂಜ್​ನಲ್ಲಿ ಇರಿಸಿಕೊಂಡು ಸೈನಿಕರು ಹೊತ್ತೊಯ್ಯಬಲ್ಲ ಸಂಚಾರಿ ಲಾಂಚರ್ ಮೂಲಕ ಈ ಕ್ಷಿಪಣಿಯನ್ನು ಉಡಾಯಿಸಲಾಯಿತು. ನೇರ ದಾಳಿಯ ರೀತಿಯಲ್ಲಿಯೇ ಟ್ಯಾಂಕ್​ಗೆ ಕ್ಷಿಪಣಿ ಅಪ್ಪಳಿಸಿತು. ಕ್ಷಿಪಣಿಯ ಹೊಡೆತಕ್ಕೆ ಟ್ಯಾಂಕ್ ಛಿತ್ರವಾಯಿತು. ಕ್ಷಿಪಣಿಯನ್ನು ರೂಪಿಸಿದ್ದ ಉದ್ದೇಶಗಳು ಸಂಪೂರ್ಣವಾಗಿ ಈಡೇರಿವೆ. ಗರಿಷ್ಠ ರೇಂಜ್​ ಪರೀಕ್ಷೆಗಳಲ್ಲಿ ಕ್ಷಿಪಣಿಯ ಪ್ರಯೋಗ ಈಗಾಗಲೇ ಯಶಸ್ವಿಯಾಗಿದೆ ಎಂದು ಡಿಆರ್​ಡಿಒ ಹೇಳಿದೆ.

ಅತಿಸೂಕ್ಷ್ಮ ಇನ್​ಫ್ರಾರೆಡ್​ ಇಮೇಜಿಂಗ್ ಸೀಕರ್ ತಂತ್ರಜ್ಞಾನ ಅಳವಡಿಸಿರುವ ಈ ಕ್ಷಿಪಣಿಯು ಅತ್ಯಾಧುನಿಕ ಏವಿಯಾನಿಕ್ಸ್​ನೊಂದಿಗೆ​ (ವೈಮಾನಿಕ ವಿನ್ಯಾಸ) ಸಜ್ಜಾಗಿದೆ. ಈ ಯಶಸ್ವಿ ಪರೀಕ್ಷೆಯ ನಂತರ ಭಾರತವು ದೇಶೀ ನಿರ್ಮಿತ 3ನೇ ತಲೆಮಾರಿನ, ಸೈನಿಕನೊಬ್ಬ ಹೊತ್ತೊಯ್ಯಬಲ್ಲಷ್ಟು ಹಗುರವಾದ ಗುರಿ ನಿರ್ದೇಶಿತ ಟ್ಯಾಂಕ್ ನಿರೋಧ ಕ್ಷಿಪಣಿ ರೂಪಿಸಿದ ವಿಶ್ವದ ಕೆಲವೇ ದೇಶಗಳಲ್ಲಿ ಒಂದು ಎನಿಸಿಕೊಂಡಿದೆ.

ಈ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್​ಡಿಒ ವಿಜ್ಞಾನಿಗಳು ಮತ್ತು ರಕ್ಷಣಾ ಉದ್ದಿಮೆಗಳನ್ನು ಅಭಿನಂದಿಸಿದ್ದಾರೆ.

- Advertisement -

Related news

error: Content is protected !!