Sunday, July 26, 2026
spot_imgspot_img
spot_imgspot_img

ಪಡುಬಿದ್ರಿ: ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಆಸಿಡ್ ನ್ನು ನೀರು ಎಂದು ಬಾವಿಸಿ ಕುಡಿದ ಯುವಕ- ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತ್ಯು…!!

- Advertisement -
- Advertisement -

ಪಡುಬಿದ್ರಿ: ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಯುವಕನೋರ್ವ ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿ ಇಟ್ಟಿದ್ದ ಟೈಲ್ಸ್ ಕ್ಲೀನಿಂಗ್ ಮಾಡುವ ಆಸಿಡ್ ನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥನಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಯುವಕನನ್ನು ಕಿರಣ್ ಎಂದು ತಿಳಿದು ಬಂದಿದೆ.

ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯನಗರ ಜಿಲ್ಲೆಯ ಕಿರಣ್ (17) ಎಂಬಾತ ತನ್ನ ಮಾವ ಕೆಲಸ ಮಾಡುವ ಸ್ಥಳವಾದ ಕಾಪುವಿನ ಪಾದೆಬೆಟ್ಟು ಎಂಬಲ್ಲಿಗೆ ಬಂದಿದ್ದು, ಡಿ.9ರಂದು ಮಧ್ಯಾಹ್ನ‌ ಕೆಲಸದವರು ಪ್ಲಾಸ್ಟಿಕ್ ಬಾಟಲಿಯಲ್ಲಿ ತುಂಬಿಸಿಟ್ಟಿದ್ದ ಟೈಲ್ಸ್ ಕ್ಲೀನಿಂಗ್ ಮಾಡುವ ಆಸಿಡ್ ನ್ನು ನೀರು ಎಂದು ಭಾವಿಸಿ ಕುಡಿದು ಅಸ್ವಸ್ಥರಾದರು.ಬಳಿಕ ಆತನನ್ನು ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಡಿ.10ರಂದು ರಾತ್ರಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿರುತ್ತದೆ.

- Advertisement -

Related news

error: Content is protected !!