Saturday, April 20, 2024
spot_imgspot_img
spot_imgspot_img

ಡ್ರಗ್​ ಪ್ರಕರಣದ ತನಿಖಾ ಹಂತದ ಮಾಹಿತಿ ಸೋರಿಕೆ ಮಾಡಿದ ಆರೋಪ: ಎಸಿಪಿ ಸೇರಿ ಇಬ್ಬರ ಅಮಾನತು.!

- Advertisement -G L Acharya panikkar
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದ  ಆರೋಪದಲ್ಲಿ ಬಂಧಿಯಾಗಿರುವ ಪ್ರಮುಖ ಆರೋಪಿ ವೀರೇನ್​ ಖನ್ನಾಗೆ ಸಹಕರಿಸಿದ ಆರೋಪದಲ್ಲಿ ತನಿಖಾ ಹಂತದ ಮಾಹಿತಿ ಸೋರಿಕೆ ಮಾಡಿದ ಆರೋಪದಡಿಯಲ್ಲಿ ಸಿಸಿಬಿಯ ಎಸಿಪಿ ಸೇರಿದಂತೆ ಇಬ್ಬರನ್ನು ಅಧಿಕಾರಿ-ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.

ಖನ್ನಾಗೆ ಸಹಕರಿಸಿದ ಆರೋಪದ ಮೇಲೆ ಎಸಿಪಿ ಮತ್ತು ಕಾನ್ಸ್​ಟೇಬಲ್​ ಅಮಾನತಿಗೆ ಗೃಹ ಸಚಿವರ ಬಳಿ ಸಿಸಿಬಿ ಶಿಫಾರಸು ಮಾಡಿದೆ. ಅಧಿಕಾರಿಗಳು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅನಂತರ ಇಲಾಖಾ ಆಂತರಿಕ ತನಿಖೆ ನಡೆಸಿದಾಗ ಎಸಿಪಿ ಕೈವಾಡ ಇರುವುದು ಪತ್ತೆಯಾಗಿತ್ತು.

 ಈ ಹಿನ್ನೆಲೆಯಲ್ಲಿ ಸಿಸಿಬಿ ಜಂಟಿ ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಎಸಿಪಿ ವಿರುದ್ಧ ಇಲಾಖಾ ಶಿಸ್ತು ಕ್ರಮಕ್ಕೆ ಪೊಲೀಸ್‌ ಆಯುಕ್ತರಿಗೆ ಮನವಿ ಮಾಡಿ ವರದಿ ನೀಡಿದ್ದರು. ಈ ವರದಿಯನ್ನಾಧರಿಸಿ ಬುಧವಾರ ಎಸಿಪಿ  ಮತ್ತು ಅವರಿಗೆ ಸಹಾಯ ಮಾಡಿದ ಆರೋಪದಲ್ಲಿ ಹೆಡ್‌ಕಾನ್‌ಸ್ಟೆಬಲ್‌ ಅವರನ್ನು ಆಯುಕ್ತ ಕಮಲ್‌ ಪಂತ್‌ ಅಮಾನತು ಮಾಡಿದ್ದಾರೆ.

- Advertisement -

Related news

error: Content is protected !!