Friday, June 19, 2026
spot_imgspot_img
spot_imgspot_img

ಡ್ರಗ್ಸ್ ಮಾಫಿಯಾ: ಮಾಹಿತಿ ನೀಡಲು ವಿಚಾರಣೆಗೆ ಹಾಜರಾದ ಇಂದ್ರಜಿತ್

- Advertisement -
- Advertisement -

ಸಿಲಿಕಾನ್ ಸಿಟಿಯಲ್ಲಿ ಡ್ರಗ್ಸ್ ಮಾಫಿಯಾ ವಿಚಾರವಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿಚಾರಣೆಗೆ ಹಾಜರಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಇರುವುದು ನಾನೇ ನೋಡಿದ್ದೀನಿ ಎಂದು ಇಂದ್ರಜಿತ್ ಮಾಧ್ಯಮಕ್ಕೆ ಹೇಳಿಕೆ ಕೊಟ್ಟ ಬೆನ್ನಲ್ಲೇ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಈಗಾಗಲೇ ತಮ್ಮ ವಕೀಲರ ಜತೆ ವಿಚಾರಣೆಗೆ ಹಾಜರಾಗಿದ್ದು ಇಂದ್ರಜಿತ್ ಹೇಳಿಕೆ ಬಗ್ಗೆ ಮತ್ತಷ್ಟು ಪ್ರಶ್ನೆಗಳನ್ನು ಎದುರಿಸಲಿದ್ದಾರೆ.

ಸಿಸಿಬಿ ಇನ್ಸ್ ಪೆಕ್ಟರ್ ಮಾಲ್ತೇಶ್ ಬೊಳೆತ್ತಿನ್ ಇಂದ್ರಜಿತ್ ಅವರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ತದನಂತರ ಡಿಸಿಪಿಗೆ ಮಾಹಿತಿ ರವಾನೆ ಮಾಡಲಿದ್ದಾರೆ. ಹೀಗಾಗಿ ನಟ-ನಟಿಯರಿಗೆ ಒಂದು ಕಡೆ ಟೆನ್ಷನ್ ಶುರುವಾಗಿದ್ದರೆ, ಮತ್ತೊಂದುಕಡೆ ಇಂದ್ರಜಿತ್ ಹೇಳಿಕೆಯತ್ತ ಎಲ್ಲರ ಚಿತ್ತ ನೆಟ್ಟಿದೆ.

- Advertisement -

Related news

error: Content is protected !!