Thursday, April 18, 2024
spot_imgspot_img
spot_imgspot_img

ಬೆಂಗಳೂರಿನಿಂದ ಕಾಸರಗೋಡು ಕಡೆಗೆ ಡ್ರಗ್ಸ್ ಸಾಗಟ; ಆರೋಪಿಗಳು ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ಮಂಗಳೂರು:ಕೇರಳದ ಕಾಸರಗೋಡು ಕಡೆಗೆ ಭಾರೀ ಪ್ರಮಾಣದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ವೇಳೆ ಕೋಣಾಜೆ ಪೊಲೀಸರು ದಾಳಿ ನಡೆಸಿ ಕಾರು ಸಹಿತ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ವಿಚಾರಿಸುತ್ತಿದ್ದ ವೇಳೆ ಕೋಣಾಜೆಯ ವಿಶ್ವವಿದ್ಯಾನಿಲಯದ ಬಳಿಯ ಗಣೇಶ್ ಮಹಲ್ ಎಂಬಲ್ಲಿ ಕಾರು ಸಂಶಯಾಸ್ಪದವಾಗಿ ನಿಲ್ಲಿಸಿದ್ದು ಕಂಡುಬಂದಿದ್ದು. ಪೊಲೀಸರು ಕಾರನ್ನು ಪರಿಶೀಲಿಸಿದಾಗ, 10.20 ಲಕ್ಷ ಮೌಲ್ಯದ 170 ಗ್ರಾಮ್ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದೆ.

ಕಾರಿನಲ್ಲಿದ್ದ ಆರೋಪಿಗಳು ಕಾಸರಗೋಡು ಜಿಲ್ಲೆಯ ಉಪ್ಪಳ ಗೇಟ್ ನಿವಾಸಿಗಳಾದ ಮಹಮ್ಮದ್ ಮುನಾಫ್, ಮಹಮ್ಮದ್ ಮುಝಾಂಬಿಲ್, ಅಹಮ್ಮದ್ ಮಷೂಕ್ ಅವರನ್ನು ಬಂಧಿüಸಲಾಗಿದೆ. ಡ್ರಗ್ಸ್ ಸಾಗಾಟಕ್ಕೆ ಬಳಸಿದ್ದ 5 ಲಕ್ಷ ಮೌಲ್ಯದ ಎಂಎಚ್ 14 ಜಿಡಿ 0561 ಸಂಖ್ಯೆಯ ಕಾರು ಮತ್ತು ನಾಲ್ಕು ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಮಂಗಳೂರು ವಿವಿಯ ಬಳಿ ಕಾರು ನಿಲ್ಲಿಸಿದ್ದರಿಂದ ಅಲ್ಲಿನ ವ್ಯಕ್ತಿಗಳಿಗೆ ಪೂರೈಕೆ ಮಾಡಲು ಸಂಚು ನಡೆಸಿದ್ದರೇ ಅನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ದೊಡ್ಡ ಪ್ರಮಾಣದ ಎಂಡಿಎಂಎ ಡ್ರಗ್ಸ್ ಪತ್ತೆಯಾಗಿದ್ದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಎಂಡಿಎಂಎ ಒಂದು ಗ್ರಾಮ್ ಡ್ರಗ್ಸಿಗೆ ಆರು ಸಾವಿರ ರೂ. ಇದ್ದು, ಸಾಮಾನ್ಯ ಜನರು ಇದನ್ನು ಬಳಕೆ ಮಾಡುವುದಿಲ್ಲ. ಹೈಫೈ ಜನರು ಮಾತ್ರ ಇದನ್ನು ಉಪಯೋಗ ಮಾಡುತ್ತಾರೆ. ಆದರೂ, ಈ ರೀತಿಯ ಡ್ರಗ್ಸನ್ನು ಬೆಂಗಳೂರು ಕಡೆಯಿಂದ ಹಾಸನ ಮಾರ್ಗವಾಗಿ ಮಂಗಳೂರು ಮೂಲಕ ಕಾಸರಗೋಡಿಗೆ ಒಯ್ಯುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದರಿಂದ ಪೊಲೀಸರು ಕಾರನ್ನು ಟ್ರಾಕ್ ಮಾಡಿದ್ದರು.

ಆರೋಪಿಗಳು ಬೆಂಗಳೂರಿನಲ್ಲಿ ಆಫ್ರಿಕನ್ ಮೂಲದ ಪ್ರಜೆಯಿಂದ ಈ ಡ್ರಗ್ಸನ್ನು ಖರೀದಿಸಿ ತರುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಅವರು ಯಾರು, ಎಲ್ಲಿಯವರು ಎನ್ನುವ ಬಗ್ಗೆ ಇನ್ನಷ್ಟು ತನಿಖೆ ನಡೆಸಬೇಕಾಗಿದೆ ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದರು. ಎಸಿಪಿ ರಂಜಿತ್ ಕುಮಾರ್ ನೇತೃತ್ವದಲ್ಲಿ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು.

ಆರೋಪಿಗಳು ಮೂವರು ಕೂಡ ಬೆಂಗಳೂರಿನಲ್ಲಿದ್ದರು. ಮುನಾಫ್ ಬೆಂಗಳೂರಿನಲ್ಲಿ ಬಿಬಿಎ ವಿದ್ಯಾರ್ಥಿಯಾಗಿದ್ದರೆ, ಮುಝಾಮಿಲ್ ನೆಲಮಂಗಲದ ಸ್ಪೋರ್ಟ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ. ಮಶೂಕ್, ಬೆಂಗಳೂರಿನ ಜೆಪಿ ನಗರದಲ್ಲಿ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಆಫ್ರಿಕನ್ ಪ್ರಜೆಯಿಂದ ಡ್ರಗ್ಸ್ ಖರೀದಿಸಿರುವ ವಿಚಾರ ಹೇಳಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರ ಸಹಾಯ ಪಡೆದು ವಿಚಾರಣೆ ಮುಂದುವರಿಸಲಾಗುವುದು ಎಂದು ಶಶಿಕುಮಾರ್ ತಿಳಿಸಿದ್ದಾರೆ.

- Advertisement -

Related news

error: Content is protected !!