Friday, June 26, 2026
spot_imgspot_img
spot_imgspot_img

ಬಾಲಿವುಡ್ ಡ್ರಗ್ಸ್ ಕೇಸ್: ಮಾಜಿ ಬಿಗ್ ಬಾಸ್ ಸ್ಪರ್ಧಿ ಬಂಧನ!

- Advertisement -
- Advertisement -

ಮುಂಬೈ: ಬಾಲಿವುಡ್ ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಬಿಗ್ ಬಾಸ್ 7 ನೇ ಸೀಸನ್ ಸ್ಪರ್ಧಿ, ನಟ ಅಜಾಝ್ ಖಾನ್ ನನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್ ಸಿ ಬಿ) ಬಂಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿ ಬಿ ಪೊಲೀಸರು ಶದಾಬ್ ಬತಾತಾ ಎಂಬ ಡ್ರಗ್ ಪೆಡ್ಲರ್ ನನ್ನು ಬಂಧಿಸಿತ್ತು. ವಿಚಾರಣೆ ವೇಳೆ ಆತ ನೀಡಿದ ಮಾಹಿತಿ ಮೇರೆಗೆ ಅಜಾಝ್ ಖಾನ್ ರನ್ನು ಮುಂಬೈ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿದೆ ಎಂದು ಎನ್ ಸಿ ಬಿ ತಿಳಿಸಿದೆ.

ಮಾ 30 ರಂದು ಮುಂಬೈನ ಅಂಧೇರಿ ಮತ್ತು ಲೋಖಂಡ್ ವಾಲಾದಲ್ಲಿರುವ ಮನೆ ಮೇಲೆ ಎನ್ ಸಿ ಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಜಾಝ್ ರಾಜಸ್ಥಾನದಲ್ಲಿದ್ದು, ಆತ ಮುಂಬೈಗೆ ಬರುತ್ತಿದ್ದಂತೆ ಆತನ ಬಂಧನವಾಗಿದೆ. ಸದ್ಯ ಅಜಾಝ್ ಖಾನ್ ಬಂಧಿಸಿದ ಎನ್ ಸಿ ಬಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

Related news

error: Content is protected !!