- Advertisement -
- Advertisement -
ನವದೆಹಲಿ: ಡ್ರಗ್ಸ್ ಜಾಲ ಪ್ರಕರಣದಲ್ಲಿ ದೆಹಲಿ ಪೊಲೀಸರು 844 ಆರೋಪಿಗಳನ್ನು ಬಂಧಿಸಿದ್ದು. ಈ ವರ್ಷದ ಜನವರಿಯಿಂದ ನವೆಂಬರ್ ತನಕ 5,000ಕ್ಕೂ ಅಧಿಕ ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2020ರ ಜನವರಿ 1ರಿಂದ 2020ರ ನವೆಂಬರ್ 31ರವರೆಗೆ 695 ಪ್ರಕರಣಗಳನ್ನು ದಾಖಲಿಸಿ, 5,271.548 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 23.904 ಕೆಜಿ ಚರಸ್, 29.184 ಕೆಜಿ ಅಫೀಮು, 4,205.392 ಕೆಜಿ ಗಾಂಜಾ, 84.932 ಕೆಜಿ ಹೆರಾಯಿನ್, 699.538 ಕೆಜಿ ಗಸಗಸೆ ತಲೆ ಮತ್ತು 1.035 ಕೆಜಿ ಕೊಕೇನ್ ವಶಪಡಿಸಿಕೊಂಡಿದ್ದಾರೆ.

219.743 ಕೆಜಿ ಟ್ರೆಮಡೋಲ್, 12,500 ಆಲ್ಪ್ರಜೋಲಮ್ ಮಾತ್ರೆಗಳು, 0.325 ಕೆಜಿ ಮೆಟಾಕ್ವಾಲೋನ್, 500 ಬ್ಯುಪ್ರೆನೋರ್ಫಿನ್ ಮತ್ತು 7.495 ಕೆಜಿ ಆಂಫೆಟಮೈನ್ ಅನ್ನು ಪೊಲೀಸರು ಜಪ್ತಿಮಾಡಿಕೊಂಡಿದ್ದಾರೆ. 2019ರಲ್ಲಿ ಪೊಲೀಸರು 681 ಪ್ರಕರಣಗಳನ್ನು ದಾಖಲಿಸಿ 872 ಜನರನ್ನು ಬಂಧಿಸಿದ್ದರು.


- Advertisement -








