Friday, March 29, 2024
spot_imgspot_img
spot_imgspot_img

ಡ್ರೈಫ್ರೂಟ್ಸ್ ,ಮೆಣಸಿನ ಕಾಯಿಯಲ್ಲಿ ಮೂಡಿದ ಗಣಪ

- Advertisement -G L Acharya panikkar
- Advertisement -

ನಾಡಿನಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಕೊರೊನಾ ಹಿನ್ನಲೆಯಲ್ಲಿ ಸರಳವಾಗಿ ಹಬ್ಬದ ಆಚರಣೆ ನಡೆಯುತ್ತಿದೆ.ವಿವಿಧ ರೀತಿಯ ಗಣೇಶನಿಗೆ ವಿಶೇಷ ಪೂಜೆ ನಡೆಯುತ್ತಿದೆ. ಆದ್ರೆ ಸೂರತ್ ನ ಕೋವಿಡ್ ಆಸ್ಪತ್ರೆಯಲ್ಲಿ ಡ್ರೈಫ್ರೂಟ್ಸ್ ನಲ್ಲಿ ಗಣಪ ಮೂಡಿಬಂದಿದ್ದಾನೆ.

ಡಾ.ಅದಿ ಮಿತ್ತಲ್ ಎಂಬುವವರು ಕೋವಿಡ್ ಆಸ್ಪತ್ರೆಯಲ್ಲಿ ಇಡಲು ಡ್ರೈಫ್ರೂಟ್ಸ್ ನಿಂದ ಈ ಗಣಪವನ್ನು ಮಾಡಿದ್ದಾರೆ. ಪೂಜೆ ನಂತರ ರೋಗಿಗಳಿಗೆ ಈ ಡ್ರೈಫ್ರೂಟ್ಸ್ ಅನ್ನು ವಿತರಣೆ ಮಾಡಲಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

ಮೆಣಸಿನಕಾಯಿಯಲ್ಲಿ ಅರಳಿದ ಗಣಪ:

ಮತ್ತೊಂದು ಕಡೆ ಮೆಣಸಿನ ಕಾಯಿಯಲ್ಲಿ ಗಣೇಶ ಅರಳಿದ್ದಾನೆ. ಅನುಬಾ ಎಂಬುವರು ಮೆಣಿಸಿನ ಕಾಯಿ ರೂಪದಲ್ಲಿ ಕಾಣುತ್ತಿರುವ ಗಣೇಶನ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಗಣಪತಿ ಹಬ್ಬ ಆಚರಿಸಲು ಹೊರಗಡೆ ಹೋಗಲು ಆಗುತ್ತಿಲ್ಲ ಎಂದು ಗಣೇಶನೇ ನಮ್ಮ ಮನೆಗೆ ಬಂದಂತಿದೆ ಎಂದು ಟ್ವೀಟ್ ಮಾಡಿದ್ದಾರೆ.

- Advertisement -

Related news

error: Content is protected !!