Friday, July 3, 2026
spot_imgspot_img
spot_imgspot_img

ಗುಣಮಟ್ಟದ ದೂರು: ಭಾರತೀಯ ಇಬೂಪ್ರೊಫೆನ್‌ ಸಿರಪ್‌ ಅಮೆರಿಕದಲ್ಲಿ ಹಿಂಪಡೆತ

- Advertisement -
- Advertisement -

ವಾಷಿಂಗ್ಟನ್: ಭಾರತದಲ್ಲಿ ಉತ್ಪಾದಿಸಲಾದ ಮಕ್ಕಳ ನೋವುಶಮನ ಇಬೂಪ್ರೊಫೆನ್‌ನ 90 ಸಾವಿರ ಬಾಟಲಿಗಳನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಅಮೆರಿಕದ ಫೆಡ‌ರ್ ಔಷದ ನಿಯಂತ್ರಣ ಸಂಸ್ಥೆ’ಎಫ್‌ಡಿಎ’ ಯು ವಿತರಕ ಸಂಸ್ಥೆಯಾದ ಟಾರೊ ಫಾರ್ಮಾಸ್ಕೂಟಿಕಲ್ಸ್‌ಗೆ ಸೂಚಿಸಿದೆ.

ಈ ಉತ್ಪನ್ನವು ಬೆರ್ರಿ ಸ್ವಾದದ ಔಷಧೀಯ ದ್ರಾವಣ ಸಂಯೋಜನೆಯಾಗಿದೆ. 2ರಿಂದ 11 ವರ್ಷದೊಳಗಿನ ಮಕ್ಕಳಿಗೆ ಅದನ್ನು ಶಿಫಾರಸು ಮಾಡಲಾಗುತ್ತದೆ. ಔಷಧ ದ್ರಾವಣದಲ್ಲಿ ಜೆಲ್ ಮಾದರಿಯ ದ್ರವ್ಯರಾಶಿ ಹಾಗೂ ಕಪ್ಪುಬಣ್ಣದ ಕಣಗಳು ಕಂಡುಬಂದಿವೆಯೆಂದು ಗ್ರಾಹಕರು ಈ ತಿಂಗಳ ಆರಂಭದಲ್ಲಿ ದೂರು ನೀಡಿದ ಬಳಿಕ ಎಫ್‌ಡಿಎ ಈ ನೋಟಿಸ್‌ ಜಾರಿಗೊಳಿಸಿದೆ.ಈ ಔಷಧಿಯನ್ನು ಸ್ಟೈಡ್ಸ್ ಫಾರ್ಮಾ ಕಂಪೆನಿಯು ತಯಾರಿಸುತ್ತಿದೆ.

ಈ ಕಂಪೆನಿಯು ಅಮೆರಿಕ ಹಾಗೂ ಇತರ ಹಲವಾರು ದೇಶಗಳಲ್ಲಿನ ಕಂಪೆನಿಗಳಿಗಾಗಿ ಜೆನೆರಿಕ್ ಔಷಧಿಗಳನ್ನು ಹಾಗೂ ಶೀತ,ನೋವು, ಅಲರ್ಜಿ ಮತ್ತು ಅಜೀರ್ಣ ಶಮನದಂತಹ ವೈದ್ಯರ ಶಿಫಾರಸು ಚೀಟಿಯ ಅಗತ್ಯವಿರದ ಔಷಧಿಗಳನ್ನು ಉತ್ಪಾದಿಸುತ್ತದೆ.ಎಫ್‌ಡಿಎ ನೋಟಿಸ್‌ನಂತೆ ಸ್ಟೈಡ್ಸ್ ಕಂಪೆನಿಯು ವಿವಾದಿತ ಔಷಧಿಯನ್ನು ಮಾರುಕಟ್ಟೆಯಿಂದ ಹಿಂಪಡೆಯುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

- Advertisement -

Related news

error: Content is protected !!