Monday, June 15, 2026
spot_imgspot_img
spot_imgspot_img

ಶಿಕ್ಷಣ ನೀತಿ ಕುರಿತು ಆಯೋಜಿಸಿರುವ ಕಾರ್ಯಕ್ರಮಕ್ಕೆ ಎಬಿವಿಪಿಗೆ ಮಾತ್ರ ಆಹ್ವಾನ ನೀಡಿರುವುದನ್ನು ಎನ್‌ಎಸ್‌ಯುಐ ಖಂಡನೆ

- Advertisement -
- Advertisement -

ಮಂಗಳೂರು: ಮಂಗಳೂರು ವಿವಿ ವತಿಯಿಂದ ಶಿಕ್ಷಣ ನೀತಿ ಕುರಿತು ಆಯೋಜಿಸಿರುವ ಕಾರ್ಯಕ್ರಮಕ್ಕೆ ಎಬಿವಿಪಿಗೆ ಮಾತ್ರ ಆಹ್ವಾನ ನೀಡಿರುವುದನ್ನು ಖಂಡಿಸಿ ಎನ್‌ಎಸ್‌ಯುಐ ಜಿಲ್ಲಾ ಘಟಕದ ವತಿಯಿಂದ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ಎದುರು ಪ್ರತಿಭಟನೆ ನಡೆಸಲಾಯಿತು.


ಕುಲಪತಿಗಳು ಎಬಿವಿಪಿ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಎಬಿವಿಪಿಗೆ ಮಾತ್ರ ಆಹ್ವಾನ ನೀಡಿ, ಬೇರೆ ವಿದ್ಯಾರ್ಥಿ ಸಂಘಟನೆಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ದೂರಿದರು.


ಸಂಸತ್ತಿನಲ್ಲಿ ಚರ್ಚಿಸದೇ, ರಾಜ್ಯ ಸರ್ಕಾರಗಳ‌ ಜತೆ ಸಮಾಲೋಚಿಸದೇ ಏಕಾಏಕಿ ಶಿಕ್ಷಣ ನೀತಿ‌ ಜಾರಿಗೊಳಿಸುವ‌ ಮೂಲಕ ಕೇಂದ್ರ ಸರ್ಕಾರವು ಶಿಕ್ಷಣದ ಕೇಸರಿಕರಣಕ್ಕೆ ಮುಂದಾಗಿದೆ ಎಂದು ಆರೋಪಿಸಿದರು.

- Advertisement -

Related news

error: Content is protected !!