Sunday, June 14, 2026
spot_imgspot_img
spot_imgspot_img

ಮೊಬೈಲ್‌ ಚಾರ್ಜರ್‌ನ ಶಾಕ್ ತಗುಲಿ ಎಂಟು ತಿಂಗಳ ಪುಟ್ಟ ಕಂದಮ್ಮ ಮೃತ್ಯು..!!

- Advertisement -
- Advertisement -

ಮೊಬೈಲ್‌ ಚಾರ್ಜರ್‌ನಿಂದ ಶಾಕ್ ತಗುಲಿ ಎಂಟು ತಿಂಗಳ ಪುಟ್ಟ ಮಗುವೊಂದು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಕಾರವಾರದ ಸಿದ್ಧರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಸಿದ್ದರ ಗಾಮದ ನಿವಾಸಿಯಾಗಿರುವ ಸಂತೋಷ ಕಲ್ಕುಡ್ಕರ್ ಹಾಗೂ ಸಂಜನಾ ಅವರ 8 ತಿಂಗಳ ಹೆಣ್ಣು ಮಗು ಸಾನಿಧ್ಯ ದುರಂತ ಅಂತ್ಯ ಕಂಡ ಕಂದಮ್ಮ.

ಈಗಷ್ಟೇ ಹರಿದಾಡುತ್ತಿರುವ ಸಾನಿಧ್ಯಳನ್ನು ಮನೆಯ ಚಾವಡಿಯಲ್ಲಿ ಮಲಗಿಸಲಾಗಿತ್ತು. ಮಗು ಅಲ್ಲೇ ನೇತಾಡುತ್ತಿದ್ದ ಚಾರ್ಜರ್‌ನ ತುದಿಯನ್ನು ಬಾಯಿಗೆ ಹಾಕಿಕೊಂಡಿದೆ. ಚಾರ್ಜರ್‌ನಲ್ಲಿ ಹರಿದು ಬರುವ ಸಣ್ಣ ಪ್ರಮಾಣದ ವಿದ್ಯುತ್ ಮಗುವಿಗೆ ಆಘಾತವನ್ನು ಉಂಟು ಮಾಡಿದೆ. ಆಘಾತಕ್ಕೆ ಒಳಗಾದ ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದೆ.

ಕಾರವಾರ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!