Monday, June 8, 2026
spot_imgspot_img
spot_imgspot_img

ಕಲ್ಲಡ್ಕ ವಲಯ ಬಂಟರ ಸಂಘದ ಗೋಳ್ತಮಜಲ್ ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಕಲ್ಲಡ್ಕ ವಲಯ ಬಂಟರ ಸಂಘದ ವತಿಯಿಂದ ಆಗಸ್ಟ್ 3 ರಂದು ಕೆಲಿಂಜ ಸಿಮ್ಲಾಜೆಯಲ್ಲಿ ನಡೆಯುವ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಮತ್ತು ಜುಲೈ 13 ರಂದು ನಡೆಯುವ ವಲಯದ ನೂತನ ಪದಾಧಿಕಾರಿಗಳ ಪದಗ್ರಹಣದ ಹಿನ್ನೆಲೆಯಲ್ಲಿ ಗೋಳ್ತಮಜಲು ಗ್ರಾಮ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ಬಗ್ಗೆ ಪೂರ್ವಭಾವಿ ಸಭೆಯು ಕೊಳಕೀರು ಪರಿಸರದಲ್ಲಿ ನಡೆಯಿತು.

ಬಂಟರ ಸಂಘದ ಕಲ್ಲಡ್ಕ ವಲಯದ ಅಧ್ಯಕ್ಷ ಪದ್ಮನಾಭ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಂಟರ ಸಂಘ ಗೋಳ್ತಮಜಲು ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಕೊಳಕೀರು ಅಶೋಕ ಆಳ್ವ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಬಂಟರ ಸಂಘ ಗೋಳ್ತಮಜಲು ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ರವಿ ರೈರವರನ್ನು ಹಾಗೂ ಕೋಶಾಧಿಕಾರಿಯಾಗಿ ಗಣೇಶ್ ಶೆಟ್ಟಿ ಕೊಳಕೀರುರವರನ್ನು ಆಯ್ಕೆ ಮಾಡಲಾಯಿತು

ಗೋಳ್ತಮಜಲು ಬಂಟರ ಸಂಘದ ಯುವ ವಿಭಾಗದ ಕಾರ್ಯದರ್ಶಿಯಾಗಿ ಪೃಥ್ವಿರಾಜ್ ಆಳ್ವ ಮತ್ತು ಅಧ್ಯಕ್ಷರಾಗಿ ಜೀವನ್ ಶೆಟ್ಟಿ ಕೊಳಕೀರು ಹಾಗೂ ಮಹಿಳಾ ವಿಭಾಗದ ಅಧ್ಯಕ್ಷರಾಗಿ ಶ್ರೀಮತಿ ಸುಖಲತಾ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀಮತಿ ಸುನಿತಾ ಶೆಟ್ಟಿ ಆಯ್ಕೆಯಾದರು.

ಸಭೆಯಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದ ಹಾಗೂ ಪದಗ್ರಹಣ ಸಮಾರಂಭದ ರೂಪರೇಷೆಗಳ ಬಗ್ಗೆ ಚರ್ಚಿಸಲಾಯಿತು.

ಗ್ರಾಮ ಸಮಿತಿಯ ಸಭೆಯಲ್ಲಿ ವಲಯ ಬಂಟರ ಸಂಘದ ನೂತನ ಅಧ್ಯಕ್ಷ ಗಣೇಶ್ ಶೆಟ್ಟಿ ಗೋಳ್ತಮಜಲು, ಕಾರ್ಯದರ್ಶಿ ನಾಗೇಶ್ ಶೆಟ್ಟಿ ಬೊಂಡಾಲ, ಗೌರವಾಧ್ಯಕ್ಷ ವಿಶ್ವನಾಥ ಆಳ್ವ ಕೊಳಕೀರು, ಗೌರವ ಸಲಹೆಗಾರ ಪೂವಪ್ಪ ಶೆಟ್ಟಿ, ಗಣ್ಯರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಗ್ರಾಮ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಶೆಟ್ಟಿ ನೆಟ್ಲ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!