Friday, May 17, 2024
spot_imgspot_img
spot_imgspot_img

ವಾಯುಮಾಲಿನ್ಯ ತಗ್ಗಿಸಲು ಕೇಜ್ರಿವಾಲ್ ಹೊಸ ಪ್ಲಾನ್- ಎಲೆಕ್ಟ್ರಿಕ್ ವಾಹನಗಳಿಗೆ ಭಾರೀ ಸಬ್ಸಿಡಿ!

- Advertisement -G L Acharya panikkar
- Advertisement -

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಏರುತ್ತಿರುವ ವಾಯುಮಾಲಿನ್ಯ ತಗ್ಗಿಸುವ ಸಲುವಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಹೊಸದೊಂದು ಯೋಜನೆಯನ್ನ ಲಾಂಚ್ ಮಾಡಿದೆ.

ಸ್ವಿಚ್ ದೆಲ್ಲಿ ಹೆಸರಿನ ಕಾರ್ಯಕ್ರಮ ಉದ್ಘಾಟಿಸಿರುವ ದೆಹಲಿ ಸರ್ಕಾರ ತನ್ನ ನಾಗರೀಕರಿಗೆ ಪೆಟ್ರೋಲ್-ಡೀಸೆಲ್ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿಸುವಂತೆ ತಿಳಿಸಿದೆ. ಅಲ್ಲದೇ ಎಲೆಕ್ಟ್ರಿಕ್ ವಾಹನಗಳನ್ನ ಖರೀದಿಸುವವರಿಗೆ ಭಾರೀ ರಿಯಾಯಿತಿಯನ್ನೂ ನೀಡಿದೆ.

ರಿಯಾಯಿತಿ ಮಾತ್ರವಲ್ಲದೇ ರಸ್ತೆ ತೆರಿಗೆ ಮತ್ತು ರಿಜಿಸ್ಟ್ರೇಸನ್​ ಚಾರ್ಜ್​ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಮುಂದಿನ 6 ತಿಂಗಳುಗಳಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳನ್ನಷ್ಟೇ ಬಾಡಿಗೆಗೆ ಖರೀದಿಸಲಿದೆ. ಅಲ್ಲದೇ ನಗರದಾದ್ಯಂತ ನೂರಾರು ಚಾರ್ಜಿಂಗ್ ಪಾಯಿಂಟ್​ಗಳನ್ನು ನಿರ್ಮಿಸಲಾಗುವುದು ಎಂದಿದ್ದಾರೆ.

ಇನ್ನು 1.50 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆ ನೀಡಿ ಖರೀದಿಸಿದ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳ ಮಾಲೀಕರಿಗೆ 30,000 ಇಂಟೆನ್ಸಿವ್ ನೀಡಲಾಗುವುದು. ಇದು ಕೇವಲ ಮೂರು ದಿನಗಳಲ್ಲಿ ಅವರ ಅಕೌಂಟ್​ಗೆ ನೇರವಾಗಿ ವರ್ಗಾವಣೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.

- Advertisement -

Related news

error: Content is protected !!