Friday, May 3, 2024
spot_imgspot_img
spot_imgspot_img

ಬ್ಯಾಂಕ್​​ಗೆ 20 ಕೋಟಿ ರೂ.ವಂಚನೆ ಕೇಸ್​​; 10 ವರ್ಷಗಳ ಬಳಿಕ ಉದ್ಯಮಿಯೋರ್ವನ ಬಂಧನ

- Advertisement -G L Acharya panikkar
- Advertisement -

2012ರಲ್ಲಿ ನಡೆದ ಬ್ಯಾಂಕ್​ ವಂಚನೆ ಪ್ರಕರಣದ ಆರೋಪಿಯೊಬ್ಬನನ್ನು ಸಿಬಿಐ (CBI) ಈಗ ಬಂಧಿಸಿದೆ. ಅಂದರೆ ಬರೋಬ್ಬರಿ 10 ವರ್ಷಗಳ ನಂತರ ಆರೋಪಿಯ ಅರೆಸ್ಟ್ ಆಗಿದೆ. ಬಂಧಿತ ಗುಜರಾತ್ ಮೂಲದ ಉದ್ಯಮಿ ಸಂಜಯ್​ ಆರ್​ ಗುಪ್ತಾ. ನೋವಾ ಶಿಪ್ಪಿಂಗ್​ ಪ್ರೈವೇಟ್​ ಲಿಮಿಟೆಡ್​​ನಲ್ಲಿ ನಿರ್ದೇಶಕನಾಗಿದ್ದು, ಬ್ಯಾಂಕ್​​ಗಳಿಗೆ ಸುಮಾರು 20 ಕೋಟಿ ರೂಪಾಯಿ ವಂಚನೆ ಮಾಡಿ, ಪ್ರಕರಣ ದಾಖಲಾಗುತ್ತಿದ್ದಂತೆ ಕೀನ್ಯಾದ ನೈರೋಬಿಗೆ ಪರಾರಿಯಾಗಿದ್ದ. ಅಂದು ಸಿಬಿಐ ಗುಪ್ತಾ ವಿರುದ್ಧ ಲುಕ್​ಔಟ್ ನೋಟಿಸ್​, ರೆಡ್​ ಕಾರ್ನರ್​ ನೋಟಿಸ್​, ಇಂಟರ್​ಪೋಲ್ ನೋಟಿಸ್​ಗಳನ್ನು ಜಾರಿ ಮಾಡಿತ್ತು. ಇದೀಗ ನೈರೋಬಿಯಿಂದ ವಾಪಸ್ ಆಗುತ್ತಿದ್ದಂತೆ ಸಿಬಿಐ ಬಂಧಿಸಿದೆ.

2012ರ ಜೂನ್​​ನಲ್ಲಿ ಮೊಟ್ಟಮೊದಲು ಅಹ್ಮದಾಬಾದ್​​ನ ಕೆನರಾ ಬ್ಯಾಂಕ್​ ಈ ಉದ್ಯಮಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಂದರೆ ಇಡೀ ನೋವಾ ಶಿಪ್ಪಿಂಗ್​ ಮತ್ತು ಅದರ ನಿರ್ದೇಶಕರು, ಪ್ರಚಾರಕರ ವಿರುದ್ಧ ದೂರು ನೀಡಿತ್ತು. ಈ ಕಂಪನಿ ಸುಮಾರು 20.68 ಕೋಟಿ ರೂಪಾಯಿ ವಂಚನೆ ಮಾಡಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿತ್ತು. ಅದರ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿತ್ತು. ಇದೀಗ ಪ್ರಕರಣದ ಪ್ರಮುಖ ಆರೋಪಿ ಉದ್ಯಮಿಯನ್ನು ಬಂಧಿಸಿರುವ ಸಿಬಿಐ ಅಹ್ಮದಾಬಾದ್​ನ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಸದ್ಯ ಉದ್ಯಮಿಯನ್ನು ಎರಡು ದಿನಗಳ ಸಿಬಿಐ ಕಸ್ಟಡಿಗೆ ನೀಡಲಾಗಿದೆ.

ಈ ಬಗ್ಗೆ ಸಿಬಿಐ ವಕ್ತಾರ ಆರ್.ಸಿ.ಜೋಶಿ ಪ್ರತಿಕ್ರಿಯೆ ನೀಡಿದ್ದು, ತನಿಖೆಯೆಲ್ಲ ಸಂಪೂರ್ಣವಾಗಿ ಪೂರ್ಣಗೊಂಡು ಗುಪ್ತಾ ಸೇರಿ ಎಂಟು ಆರೋಪಿಗಳ ವಿರುದ್ಧ 2013ರಲ್ಲಿಯೇ ಚಾರ್ಜ್​ಶೀಟ್ ದಾಖಲಾಗಿದೆ. ಗುಪ್ತಾ ತುಂಬ ವರ್ಷಗಳಿಂದ ತಲೆಮರೆಸಿಕೊಂಡಿದ್ದರು. ಇದೀಗ ಬಂಧಿಸಲಾಗಿದ್ದು, ಕೋರ್ಟ್​​ನಲ್ಲಿ ವಿಚಾರಣೆ ನಡೆಯಲಿದೆ ಎಂದು ಹೇಳಿದ್ದಾರೆ

- Advertisement -

Related news

error: Content is protected !!