Monday, June 22, 2026
spot_imgspot_img
spot_imgspot_img

ಮಂಗಳೂರು: ಆಪದ್ಬಾಂಧವ ಸಂಘಟನೆಯ ಆಸೀಫ್‌ ಬಂಧನ

- Advertisement -
- Advertisement -

ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯ ಮಹಿಳಾ ಸೆಕ್ಯುರಿಟಿ ಸಿಬ್ಬಂದಿ ಮೇಲೆ ಆಪದ್ಬಾಂಧವ ಸಂಘಟನೆಯ ಆಸೀಫ್‌ ಅನುಚಿತ ವರ್ತನೆ ತೋರಿ ಹಲ್ಲೆ ದೂರು ದಾಖಲಾಗಿದ್ದು, ಪ್ರಕರಣದ ದಾಖಲಿಸಿದ ಪೊಲೀಸರು ಆಸಿಫ್ ಅವರನ್ನು ಬಂಧಿಸಿದ್ದಾರೆ.

ಆಸಿಫ್ ವೆನ್ಲಾಕ್ ಆಸ್ಪತ್ರೆಗೆ ಇಬ್ಬರು ರೋಗಿಗಳನ್ನು ಕರೆತಂದಿದ್ದರು. ಹೊರಗಡೆ ಆಂಬುಲೆನ್ಸ್ ನಿಲ್ಲಿಸಿ ರೋಗಿಗಳನ್ನು ಒಳಗಡೆ ಕರೆದೊಯ್ದು ಅಡ್ಮಿಶನ್ ಮಾಡುತ್ತಿದ್ದಾಗ ಸೆಕ್ಯುರಿಟಿ ಗಾರ್ಡ್ ಸಿಬ್ಬಂದಿ ವಾಹನವನ್ನು ಹೊರಗೆ ಒಯ್ಯುವಂತೆ ಸೂಚಿಸಿದ್ದಾರೆ. ಆದರೆ ರೋಗಿಗಳನ್ನು ಅಡ್ಮಿಶನ್ ಮಾಡುತ್ತಿದ್ದೇನೆ, ಸ್ವಲ್ಪ ಹೊತ್ತು ಕಾಯಿರಿ ಎಂದು ಆಸಿಫ್ ಹೇಳಿದ್ದಾರೆ.

ಸ್ವಲ್ಪ ಹೊತ್ತಾದರೂ ಆಂಬುಲೆನ್ಸ್ ತೆರವು ಮಾಡದ್ದಕ್ಕೆ ಮಹಿಳಾ ಸಿಬ್ಬಂದಿ ವಾಹನ ತೆಗೆಯುವಂತೆ ಹೇಳಿದ್ದು, ಆಸಿಫ್ ಮತ್ತು ಮಹಿಳಾ ಸಿಬ್ಬಂದಿ ನಡುವೆ ಮಾತಿಗೆ ಮಾತಾಗಿತ್ತು. ಈ ವೇಳೆ, ಸಿಬ್ಬಂದಿಯನ್ನು ದೂಡಿ ಕೈಮಾಡಿದ್ದಾರೆ ಎನ್ನಲಾಗುತ್ತಿದ್ದು, ಈ ಬಗ್ಗೆ ಆಸ್ಪತ್ರೆ ಕಡೆಯಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಆಸಿಫ್ ಅವರನ್ನು ಕರೆದೊಯ್ದಿದ್ದಾರೆ. ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!