Friday, May 3, 2024
spot_imgspot_img
spot_imgspot_img

ಶತಕ ಬಾರಿಸಿ ಹಲವು ದಾಖಲೆ ಬರೆದ ಕೆ.ಎಲ್ ರಾಹುಲ್

- Advertisement -G L Acharya panikkar
- Advertisement -

 ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್.ರಾಹುಲ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ತಂಡವನ್ನು ಆಧರಿಸಿದ್ದ ರಾಹುಲ್‌ ಎರಡನೇ ಟೆಸ್ಟ್‌ನಲ್ಲಿ ಶತಕ ಬಾರಿಸುವ ಮೂಲಕ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ಮೊದಲ ದಿನದ ಗೌರವ ಸಂಪಾದಿಸಿದೆ.

ಏಶ್ಯಾದಿಂದ ಹೊರಕ್ಕೆ ಹೆಚ್ಚು ಟೆಸ್ಟ್ ಶತಕ ಬಾರಿಸಿದವರ ಪಟ್ಟಿಯಲ್ಲಿ ರಾಹುಲ್ ಈಗ ಸೆಹವಾಗ್ ಜೊತೆ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದರು. ಸೆಹವಾಗ್ ಮತ್ತು ರಾಹುಲ್ ತಲಾ ನಾಲ್ಕು ಶತಕ ಬಾರಿಸಿದ್ದಾರೆ. ಸುನೀಲ್ ಗಾವಸ್ಕರ್ ಮೊದಲ ಸ್ಥಾನದಲ್ಲಿದ್ದು, ಅವರು 15 ಶತಕ ಗಳಿಸಿದ್ದಾರೆ.ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನಡೆಸಿದರು. 2011ರ ಬಳಿಕ ಏಶ್ಯಾದಿಂದ ಹೊರಗೆ ಭಾರತೀಯ ಆರಂಭಿಕ ಜೋಡಿಯಿಂದ ಬಂದ ಮೊದಲ ಶತಕದ ಜೊತೆಯಾಟವಿದು. 2011ರ ಜನವರಿಯಲ್ಲಿ ವೀರೆಂದ್ರ ಸೆಹವಾಗ್ ಮತ್ತು ಗೌತಮ್ ಗಂಭೀರ್ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ವಿಕೆಟ್ ಗೆ 137 ರನ್ ಜೊತೆಯಾಟ ನಡೆಸಿದ್ದರು.

ಲಾರ್ಡ್ಸ್‌ ಅಂಗಳದಲ್ಲಿ ರಾಹುಲ್‌ ಬಾರಿಸಿದ ಶತಕ ಟೆಸ್ಟ್‌ ವೃತ್ತಿ ಜೀವನದಲ್ಲಿ ಆರನೇಯದ್ದು. ಆದರೆ ಇಂಗ್ಲೆಂಡ್‌ ನೆಲದಲ್ಲಿ ಎರಡನೇ ಬಾರಿಗೆ ಶತಕ ಬಾರಿಸುವ ಮೂಲಕ ರಾಹುಲ್‌ ದಿಗ್ಗಜ ಕ್ರಿಕೆಟಿಗರ ಸಾಲಿನಲ್ಲಿ ಬಂದು ನಿಂತಿದ್ದಾರೆ. ಇಂಗ್ಲೆಂಡ್‌ ಪ್ರವಾಸದ ವೇಳೆಯಲ್ಲಿ ಎರಡು ಶತಕ ಬಾರಿಸಿದ ಐದನೇ ಆಟಗಾರ ಅನ್ನೋ ಹಿರಿಮೆಗೆ ರಾಹುಲ್‌ ಪಾತ್ರರಾಗಿದ್ದಾರೆ.

driving
- Advertisement -

Related news

error: Content is protected !!