

ಕೇರಳ: ಕರ್ನಾಟಕ ನಕ್ಸಲ್ ನಿಗ್ರಹ ದಳ ಅರಣ್ಯ ವಲಯದಲ್ಲಿ ಕೂಂಬಿಂಗ್ ನಡೆಸುತ್ತಿರುವ ಕಾರಣ ವಿಕ್ರಂ ಗೌಡ ಜೊತೆಗಿದ್ದ ಕೋಟ ಹೊಂಡ ರವಿ, ಜಯಣ್ಣ. ರಮೇಶ್, ಲತಾ ಮುಂಡಗಾರು, ಸುಂದರಿ, ಜಿಶಾ ಮತ್ತು ವನಜಾಕ್ಷಿ ಕೇರಳದ ಅರಣ್ಯ ವಲಯಕ್ಕೆ ಪ್ರವೇಶಿಸುವ ಸಾಧ್ಯತೆಯಿದೆ.ಈ ಹಿನ್ನಲೆಯಲ್ಲಿ ಕೇರಳದಲ್ಲೂ ವೈಮಾನಿಕ ಕಾರ್ಯಾಚರಣೆ ನಡೆಸಲಾಗಿದೆ.
ಮಲಪ್ಪುರಂ, ವಯನಾಡ್ ಮತ್ತು ಕಣ್ಣೂರು ಜಿಲ್ಲೆಗಳ ಕೇರಳ ಕರ್ನಾಟಕ ಅರಣ್ಯವಲಯದಲ್ಲಿ ಹೆಲಿಕಾಪ್ಟರ್ ಮೂಲಕ ನಿಗಾ ವಹಿಸಲಾಗಿದೆ. ವಯನಾಡ್ ಎಎಸ್ಪಿ. ಟಿ.ಎನ್.ಸಜೀವನ್, ಪೇರವೂರ್ ಡಿವೈಎಸ್ಪಿ. ಕೆ.ವಿ.ಪ್ರಮೋದನ್ ಹಾಗೂ ನಕ್ಸಲ್ ನಿಗ್ರಹ ದಳದ ಸದಸ್ಯರು ಈ ತಂಡದಲ್ಲಿದ್ದರು.ಪಶ್ಚಿಮ ಘಟ್ಟದ 5 ದಳಗಳಲ್ಲಿ ಅತಿ ಹೆಚ್ಚು ಸಕ್ರಿಯವಾಗಿದ್ದ ಕಬನಿ ದಳದ ಕಮಾಂಡರ್ ಸಿ.ಪಿ.ಮೊಯ್ದಿನ್ ಬಂಧನ ಹಾಗೂ ವಿಕ್ರಂ ಗೌಡ ಹತ್ಯೆಯಿಂದಾಗಿ ಮಾವೋವಾದಿ ಕಬಿನಿದಳಂ ತಂಡದ ಬಲ ಕುಗ್ಗಿದೆ. ಮೊಯ್ಲಿನ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ವಿಕ್ರಂ ಗೌಡ ಮತ್ತು ತಂಡ ಕರ್ನಾಟಕ ಅರಣ್ಯ ಪ್ರದೇಶಕ್ಕೆ ಪ್ರವೇಶಿಸಿತ್ತು. ಇದಾದ ಬಳಿಕ ಸಿ.ಪಿ.ಮೊಯ್ದಿನ್ ಬಂಧನಕ್ಕೊಳಗಾಗಿದ್ದ. ವಿಕ್ರಂ ಗೌಡ ಹತ್ಯೆಯೊಂದಿಗೆ ತಂಡದ ಇತರ ಸದಸ್ಯರನ್ನು ಶರಣಾಗತರಾಗಿಸಲು ನಕ್ಸಲ್ ವಿರೋಧಿ ಪಡೆಗಳು ಯತ್ನಿಸುತ್ತಿವೆ.








