Thursday, May 2, 2024
spot_imgspot_img
spot_imgspot_img

ಕೋಟ್ರಗುತ್ತು: (ಎ.20-21) ಶ್ರೀ ವೈದ್ಯನಾಥ ಮತ್ತು ಪರಿವಾರ ದೈವಗಳ ನೂತನ ಭಂಡಾರಮನೆ ಪ್ರವೇಶ ಹಾಗೂ ಭಂಡಾರಗಳ ಪ್ರತಿಷ್ಠೆ ಕಲಶಾದಿಗಳು ಹಾಗೂ “ಹಸಿರು ಹೊರೆಕಾಣಿಕೆ”ಯ ವೈಭವದ ಮೆರವಣಿಗೆ

- Advertisement -G L Acharya panikkar
- Advertisement -

ಕೋಟ್ರಗುತ್ತು: ಶ್ರೀ ವೈದ್ಯನಾಥ, ಜಾನುವೈದ್ಯ ಮತ್ತು ಕಲ್ಲುರ್ಟಿ, ಪಂಜುರ್ಲಿ, ಕೊರತಿ ಸಹಿತ ಪರಿವಾರ ದೈವಗಳ ದೈವಸ್ಥಾನ,ಕೋಟ್ರಗುತ್ತು ಭಂಡಾರಮನೆ ಯಲ್ಲಿ ಶ್ರೀ ವೈದ್ಯನಾಥ ಮತ್ತು ಪರಿವಾರ ದೈವಗಳ ನೂತನ ಭಂಡಾರಮನೆ ಪ್ರವೇಶ ಹಾಗೂ ಭಂಡಾರಗಳ ಪ್ರತಿಷ್ಠೆ ಕಲಶಾದಿಗಳು ತಾ.20.04.2024 ಶನಿವಾರ ಮತ್ತು 21.04.2024 ಆದಿತ್ಯವಾರ ದಂದು ವೇದಮೂರ್ತಿ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ಜರಗಲಿರುವುದು

“ಹಸಿರು ಹೊರೆಕಾಣಿಕೆ”ಯ ವೈಭವದ ಮೆರವಣಿಗೆಯು ಇಂದು ಸಂಜೆ 3.00 ಗಂಟೆಗೆ ನರಸಿಂಹ ಆಳ್ವರವರ ನೇತೃತ್ವದಲ್ಲಿ ಕೋಟ್ರಗುತ್ತು ಲಕ್ಷ್ಮಿನರಸಿಂಹ ದೇವಸ್ಥಾನದಿಂದ ಹೊರಟು ವೈದ್ಯನಾಥ ಸ್ವಾಮಿಯ ಭಂಡಾರಮನೆಗೆ ತಲುಪಿತು.

20.04.2024 ಶನಿವಾರ ಬೆಳಿಗ್ಗೆ ಅನುಜ್ಞಾಕಲಶ, ಶಯ್ಯಪೂಜೆ, ಗಣ ಹೋಮ, ಜೀವೋಧ್ವಾಪನೆ, ಜೀವಕಲಶ, ಶಯ್ಯಾಗಮನ, ಶಯನ ನಡೆಯಲಿದೆ.
ಸಂಜೆ ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ರಕ್ಷೆಘ್ನ ಹೋಮ, ವಾಸ್ತುಬಲಿ, ಧಾನ್ಯಾಧಿವಾಸ, ಕಲಶ ಪೂಜೆ, ಕಲಶಾಧಿವಾಸ ಜರಗಳಿದೆ.
21-04-2024 ಆದಿತ್ಯವಾರ ದಂದು ಬೆಳಿಗ್ಗೆ ಗಂಟೆ 8.33 ರಿಂದ 9.42ರ ವೃಷಭ ಲಗ್ನದಲ್ಲಿ ಭಂಡಾರಮನೆ ಪ್ರವೇಶ, ಸಾನಿಧ್ಯ ಪ್ರತಿಷ್ಠೆ, ಜೀವಕಲಶಾಭಿಷೇಕ, ಸಾನಿಧ್ಯ ಕಲಶಾಭಿಷೇಕ, ಪರಿಕಲಶಾಭಿಷೇಕ ನಡೆಯಲಿದೆ. ಮಧ್ಯಾಹ್ನ ಗಂಟೆ 12.30ಕ್ಕೆ : ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಂತರ ಮಧ್ಯಾಹ್ನ ಗಂಟೆ 1.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ

21-04-2024 ಆದಿತ್ಯವಾರ ರಾತ್ರಿ 8.30 ರಿಂದ ಶ್ರೀ ಬೆಂಕಿನಾಥೇಶ್ವರ ಕೃಪಾಪೋಷಿತ ದಶವತಾರ ಯಕ್ಷಗಾನ ಮಂಡಳಿ ಬಾಳ, ಕಳವಾರು ಇವರು “ಶ್ರೀ ದೇವಿ ಮಹಾತ್ಮ” ಎಂಬ ಪುಣ್ಯ ಕಥಾಭಾಗವನ್ನು ಆಡಿ ತೋರಿಸಲಿರುವರು. .ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!