- Advertisement -
- Advertisement -
ಬಂಟ್ವಾಳ: ವಿಶ್ವ ಪರಿಸರ ದಿನದ ಅಂಗವಾಗಿ ದಡ್ಡಲಕಾಡುವಿನ ಶ್ರೀದುರ್ಗಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ವನಮಹೋತ್ಸವ ಆಚರಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ದಡ್ಡಲಕಾಡು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಆವರಣದಲ್ಲಿ ತೆಂಗಿನ ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಟ್ರಸ್ಟ್ ಪ್ರಮುಖರಾದ ಪುರುಷೋತ್ತಮ ಅಂಚನ್, ಶೇಖರ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ನವೀನ ಸೇಸಗುರಿ, ಪೂವಪ್ಪ ಮೆಂಡನ್, ಹರೀಶ್ ಕುಲಾಲ್, ಸಂತೋಷ್ ಪೂಜಾರಿ, ಮಹೇಶ್ ಕುಲಾಲ್, ಅಶ್ವಥ್ ಡೆಚ್ಚಾರ್, ಲೋಕನಾಥ ಪೂಜಾರಿ, ಬಾಲಕೃಷ್ಣ ಗೌಡ, ಹರೀಶ್ ಕುಲಾಲ್ ಕರೆಂಕಿ, ಉದಯ ಕರೆಂಕಿ, ಹರೀಶ್ ನೆಕ್ಕರೆ ಮತ್ತಿತರರು ಉಪಸ್ಥಿತರಿದ್ದರು.
- Advertisement -