Sunday, June 14, 2026
spot_imgspot_img
spot_imgspot_img

ಮಂಜೇಶ್ವರ: ಕಗ್ಗಲ್ಲಿನ ಕೋರೆಯಲ್ಲಿ ಅನಧಿಕೃತವಾಗಿ ಸಂಗ್ರಹಿಸಿಡಲಾದ ಸ್ಫೋಟಕ ವಸ್ತುಗಳು ಪತ್ತೆ ಇಬ್ಬರ ಸೆರೆ

- Advertisement -
- Advertisement -

ಮಂಜೇಶ್ವರ: ಕಗ್ಗಲ್ಲಿನ ಕೋರೆಯಲ್ಲಿ ಅನಧಿಕೃತವಾಗಿ ಸಂಗ್ರಹಿಡಲಾದ ಸ್ಪೋಟಕ ವಸ್ತುಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿ ಇಬ್ಬರನ್ನು ಬಂಧಿಸಿದ್ದಾರೆ.

ಕೋರೆಯ ಕಾರ್ಮಿಕರಾದ ಜಾರ್ಕಂಡ್ ನಿವಾಸಿ ಸುಜಿತ್ಟಿಗ, ಮಲಪುರಂ ನಿವಾಸಿ ಅಬ್ದುಲ್ ಕಾದರ್ ರವರನ್ನು ಬಂಧಿಸಿದ್ದಾರೆ.

ಕೊಡ್ಲಮೊಗರು ಸಮೀಪದ ಬೋರ್ಕಳದಲ್ಲಿ ಕಾರ್ಯಾಚರಿಸುತ್ತಿದ್ದ ಕಗ್ಗಲ್ಲಿನ ಕೋರೆಗೆ ಮಂಜೇಶ್ವರ ಠಾಣೆಯ ಎಸ್.ಐ ಗಳಾದ ಲಿನೇಶ್, ಸುಮೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಕೋರೆಯಲ್ಲಿ ಸಂಗ್ರಹಿಸಿಡಲಾದ ೩೩ ಜಲಾಟೆಕ್‌ಸ್ಟಿಕ್, ೨೫ ಇಲೆಕ್ಕಿಂಕಲ್ ಡಿಕ್ಷನೇಟರ್, ಸ್ವಿಚ್ ಬೋರ್ಡ್, ಕಂಪ್ರರ್ಸ‌ನ್ನು ಪೊಲೀಸರು ವಶಪಡಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕೋರೆಯ ಮಾಲಕ ಹಾಗೂ ನಡೆಸುತ್ತಿರುವ ವ್ಯಕ್ತಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!