Friday, April 26, 2024
spot_imgspot_img
spot_imgspot_img

ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ವಾಹನ ಸಂಚಾರ ಸ್ಥಗಿತ; ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯೆಯೇ ಅಸುನೀಗಿದ ಯುವತಿ

- Advertisement -G L Acharya panikkar
- Advertisement -

ಮಂಗಳೂರಿನಲ್ಲಿ ವ್ಯಾಸಂಗದಲ್ಲಿದ್ದು ಕೊನೆ ಪರೀಕ್ಷೆಯ ವೇಳೆ ಕಾಣಿಸಿಕೊಂಡ ಅನಾರೋಗ್ಯದ ನಿಮಿತ್ತ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಆಗುತ್ತಿರುವಾಗ ಟ್ರಾಫಿಕ್ ಸಮಸ್ಯೆಯಿಂದ ಬಳಲಿ ಸೂಕ್ತ ಸಮಯದಲ್ಲಿ ಗಿಡಮೂಲಿಕೆ ಔಷಧಿ ತೆಗೆದುಕೊಳ್ಳಲು ಆಗದೆ ಯುವತಿಯೊಬ್ಬಳು ಮೃತ ಪಟ್ಟಿರುವ ಬಗ್ಗೆ ಸ್ಥಳೀಯವಾಗಿ ಮತ್ತು ಜಾಲತಾಣದಲ್ಲಿ ಕೇಳಿ ಬಂದಿದೆ. ಈ ಘಟನೆ ಹೊನ್ನಾವರದಲ್ಲಿ ನಡೆದಿದೆ. ಹೊನ್ನಾವರ ತಾಲೂಕಿನ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯ ಉಪ್ಲೆಯ ಯುವತಿ ವಿನುತಾ ಶೇಟ್ ಮೃತಪಟ್ಟ ಯುವತಿ.

ಮಂಗಳೂರಿನಲ್ಲಿ ವ್ಯಾಸಂಗ ದಲ್ಲಿದು ಕೊನೆಯ ಪರೀಕ್ಷೆಯ ವೇಳೆ ಕಾಣಿಸಿಕೊಂಡ ಅನಾರೋಗ್ಯದ ನಿಮಿತ್ತ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಾಸ್ ಆಗುತ್ತಿರುವಾಗ ಹೊನ್ನಾವರದಲ್ಲಿ ಟ್ಯಾಂಕರ್ ಪಲ್ಟಿಯಾಗಿ ಸಂಚಾರ ಬಂದಾದ ಕಾರಣ ಮನೆಗೆ ಹೋಗಿ ಗಿಡಮೂಲಿಕೆ ಔಷಧಿ ತೆಗೆದುಕೊಳ್ಳಲು ಆಗದೆ ಇರುವುದರಿಂದ ಮೃತ ಪಟ್ಟಿರುವ ಬಗ್ಗೆ ಸ್ಥಳೀಯವಾಗಿ ಮತ್ತು ಜಾಲತಾಣದಲ್ಲಿ ಕೇಳಿ ಬಂದಿದೆ.

ಕಲಿಕೆಯಲ್ಲಿ ಪ್ರತಿಭಾನ್ವಿತೆಯಾಗಿದ್ದ ಈಕೆ, ಮಂಗಳೂರಿನಲ್ಲಿ ಬಿ.ಇ ಪರೀಕ್ಷೆ ಬರೆದಿದ್ದು ಕೊನೆಯ ಪರೀಕ್ಷೆ ಮುಗಿಸಿ ಮನೆಗೆ ಬರುವವಳಿದ್ದಳು. ಪರಿಕ್ಷೆ ಬರೆಯುವ ಸಂದರ್ಭದಲ್ಲಿಯೇ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿದ್ದು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಬೇಕು ಎನ್ನುವ ಮಹದಾಸೆಯಿಂದ ಆರೋಗ್ಯದ ಬಗ್ಗೆ ಹೆಚ್ಚು ಲಕ್ಷ್ಯ ಕೊಡದೆ ಪರೀಕ್ಷೆ ಬರೆದು ಮುಗಿಸಿದ್ದಾಳೆ. ಪರೀಕ್ಷೆ ಮುಗಿಸಿ ಮನೆಗೆ ಬರುವ ಮೊದಲು ತಂದೆಗೆ ಅನಾರೋಗ್ಯದ ಬಗ್ಗೆ ತಿಳಿಸಿದ್ಧಾಳೆ. ತಂದೆ ತಾಯಿ ಇಬ್ಬರೂ ಮಂಗಳೂರಿಗೆ ತೆರಳಿ ಪ್ರಸಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಅಲ್ಲಿಂದ ಮನೆಗೆ ಕರೆದುಕೊಂಡು ಹೊರಟಿದ್ದರು ಎನ್ನಲಾಗುತ್ತಿದೆ.

ಅವಳ ಆರೋಗ್ಯ ಹದಗೆಟ್ಟಿರುವ ಬಗ್ಗೆ ತಿಳಿಯ ಹೊರಟಾಗ, ಊರಿನ ಕೆಲವರನ್ನು ಕೇಳಿದಾಗ ಅವಳಿಗೆ ಆಗಿರುವುದು “ಸರ್ಪಸುತ್ತು” ಆಗಿತ್ತು ಎಂದು ತಿಳಿದುಬಂದಿದೆ. ಆದರೆ ಶರೀರದ ಒಳಗಡೆ ಆಗಿದ್ದರಿಂದ ವೈದ್ಯರಿಗೂ ಈ ಬಗ್ಗೆ ಸರಿಯಾದ ಮಾಹಿತಿ ಸಿಗಲಿಲ್ಲ ಎಂದೇ ಹೇಳಲಾಗುತ್ತಿದೆ. ಯುವತಿಯ ತಂದೆಗೆ ವಿಷಯ ತಿಳಿದ ಮೇಲೆ ಊರಿಗೆ ತರಾತುರಿಯಲ್ಲಿ ಕರೆತಂದು ನಾಟಿ ಔಷದಿ ಕೊಡಿಸಲು ಮುಂದಾಗಿದ್ದು ಕೂಡಲೇ ಮಂಗಳೂರಿನಿಂದ ಕಾರಿನಲ್ಲಿ ಮಗಳನ್ನು ಕರೆದುಕೊಂಡು ಹೊರಟಿದ್ದಾರೆ.

ಹೊನ್ನಾವರ ಪಟ್ಟಣದ ಶರಾವತಿ ಸರ್ಕಲ್ ನಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ವಾಹನ ಸಂಚಾರ ಸ್ಥಗಿತವಾಗಿದ್ದರಿಂದ ಮಗಳಿಗೆ ಚಿಕಿತ್ಸೆ ಕೊಡಿಸುವುದಕ್ಕೆ ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾಳೆ ಎಂದು ತಿಳಿದು ಬಂದಿದೆ. ಹೆತ್ತ ಮಗಳ ಅಕಾಲಿಕ ನಿಧನದಿಂದ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!