Thursday, April 25, 2024
spot_imgspot_img
spot_imgspot_img

ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೋರಿಕೆ: ಭಾರತಕ್ಕೆ ಎರಡನೆಯ ಸ್ಥಾನ!!

- Advertisement -G L Acharya panikkar
- Advertisement -

ನವದೆಹಲಿ: ಜನವರಿಯಿಂದ ಜೂನ್‌ ನಡುವಣ ಅವಧಿಯಲ್ಲಿ ಸರ್ಕಾರಗಳು ಫೇಸ್‌ಬುಕ್‌ ಬಳಕೆದಾರರ ಮಾಹಿತಿ ಕೇಳುವ ಪ್ರಮಾಣವು ಶೇಕಡ 23ರಷ್ಟು ಹೆಚ್ಚಳ ಆಗಿದೆ. ಮಾಹಿತಿ ಕೇಳುವ ದೇಶಗಳ ಸಾಲಿನಲ್ಲಿ ಭಾರತವು ಎರಡನೆಯ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದೆ.

ಫೇಸ್‌ಬುಕ್‌ ಪ್ರಕಟಿಸಿರುವ ಪಾರದರ್ಶಕತೆಗೆ ಸಂಬಂಧಿಸಿದ ಇತ್ತೀಚಿನ ವರದಿ ಅನುಸಾರ ಭಾರತವು ಒಟ್ಟು 35,560 ಕೋರಿಕೆಗಳನ್ನು ಈ ಅವಧಿಯಲ್ಲಿ ಸಲ್ಲಿಸಿದೆ. ಶೇಕಡ 50ರಷ್ಟು ಪ್ರಕರಣಗಳಲ್ಲಿ ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಸಂಬಂಧಿಸಿದ ಒಂದಲ್ಲ ಒಂದು ವಿವರವನ್ನು ಸರ್ಕಾರಕ್ಕೆ ನೀಡಿದೆ.

2019ರ ಉತ್ತರಾರ್ಧದಲ್ಲಿ (ಜುಲೈನಿಂದ ಡಿಸೆಂಬರ್‌ವರೆಗಿನ ಅವಧಿ) ಜಾಗತಿಕ ಮಟ್ಟದಲ್ಲಿ ಸರ್ಕಾರಗಳ ಕಡೆಯಿಂದ ಒಟ್ಟು 1.40 ಲಕ್ಷ ಕೋರಿಕೆಗಳು ಫೇಸ್‌ಬುಕ್‌ಗೆ ಬಂದಿದ್ದವು. ಇದು 2020ರ ಮೊದಲ ಆರು ತಿಂಗಳಲ್ಲಿ (ಜನವರಿಯಿಂದ ಜೂನ್‌ವರೆಗಿನ ಅವಧಿ) 1.73 ಲಕ್ಷಕ್ಕೆ ಹೆಚ್ಚಳವಾಗಿದೆ.

ಜನವರಿ-ಜೂನ್‌ ನಡುವಿನ ಅವಧಿಯಲ್ಲಿ ಅತಿಹೆಚ್ಚಿನ ಕೋರಿಕೆಗಳು, ಅಂದರೆ 61,528, ಅಮೆರಿಕದಿಂದ ಬಂದಿವೆ. ಅಮೆರಿಕದಿಂದ ಬಂದ ಕೋರಿಕೆಗಳಿಗೆ ಸಂಬಂಧಿಸಿದಂತೆ ಶೇಕಡ 88ರಷ್ಟು ಪ್ರಕರಣಗಳಲ್ಲಿ ಒಂದಲ್ಲ ಒಂದು ಮಾಹಿತಿ ನೀಡಲಾಗಿದೆ ಎಂದು ಫೇಸ್‌ಬುಕ್‌ ವರದಿ ಹೇಳಿದೆ. ಅಮೆರಿಕ ಮತ್ತು ಭಾರತದ ನಂತರದ ಸ್ಥಾನಗಳಲ್ಲಿ ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್ ಇವೆ.

- Advertisement -

Related news

error: Content is protected !!