Sunday, April 28, 2024
spot_imgspot_img
spot_imgspot_img

ಮಂಗಳೂರು ಪೊಲೀಸ್ ಕಮಿಷನರ್ ಹೆಸರಿನಲ್ಲಿ ನಕಲಿ ವಾಟ್ಸಪ್ ಮೆಸೇಜ್; ಹಣಕ್ಕೆ ಬೇಡಿಕೆ

- Advertisement -G L Acharya panikkar
- Advertisement -

ಮಂಗಳೂರು ನಗರ IPS ಅಧಿಕಾರಿ, ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಹೆಸರಿನಲ್ಲಿ ಈ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ. 8319051976 ನಂಬರ್ ನಲ್ಲಿ ವಾಟ್ಸಪ್ ಖಾತೆ ತೆರೆದು ಕಮೀಷನರ್ ಫೋಟೋವನ್ನು ಡಿ.ಪಿ.ಗೆ ಹಾಕಿಕೊಂಡು ವಂಚಿಸುವ ಪ್ರಯತ್ನವಾಗಿದೆ.

ನಾನು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಎಂದು ನಕಲಿ ವಾಟ್ಸಪ್ ಖಾತೆಯಿಂದ ವಂಚಕ ಪರಿಚಯಿಸಿಕೊಂಡಿದ್ದು. ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ UPI ವರ್ಕ್ ಆಗ್ತಿಲ್ಲ. ತುರ್ತಾಗಿ ಹಣ ಬೇಕಾಗಿದ್ದು, ಹಣ ವರ್ಗಾವಣೆ ಮಾಡುವಂತೆ ಸಂದೇಶ ರವಾನಿಸುತ್ತಿದ್ದಾನೆ. ಇದರ ಜೊತೆಗೆ ಒಂದು ಗಂಟೆಯೊಳಗೆ ವಾಪಸು ಹಣ ಹಾಕುವ ಭರವಸೆಯನ್ನು ವಂಚಕ ನೀಡಿದ್ದಾನೆ. ಕೇವಲ ಮೆಸೇಜ್‌ ಮಾತ್ರವಲ್ಲದೇ ವಾಯ್ಸ್ ಕಾಲ್ ಸಹ ಮಾಡಿದ್ದಾನೆ.

ಇನ್ನು ತನ್ನ ಹೆಸರಲ್ಲಿ ಈ ರೀತಿ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಯಾಗಿರುವ ವಿಚಾರ ತಿಳಿದು ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್ ಸ್ಪಷ್ಟನೆ ನೀಡಿದ್ದಾರೆ. ಇದೊಂದು ಫೇಕ್ ಕಾಲ್ ಆಗಿದ್ದು, ಇದಕ್ಕೆ ಯಾರು ಕೂಡಾ ಪ್ರತಿಕ್ರಿಯಿಸದಂತೆ ಕೇಳಿಕೊಂಡಿದ್ದಾರೆ.

ಈ ನಕಲಿ ನಂಬರ್ ಟ್ರೂ ಕಾಲರ್‌ನಲ್ಲಿ ಚಕ್ರವರ್ತಿ ಎಂಬ ಹೆಸರನ್ನು ಸೂಚಿಸುತ್ತಿದ್ದು, ಸದ್ಯ ಪೊಲೀಸ್ ಕಮೀಷನರ್ ಸೂಚನೆ ಬೆನ್ನಲೆ ಸೈಬರ್ ಕ್ರೈಮ್ ಪೊಲೀಸರು ನಕಲಿ ನಂಬರ್‌ನ ಹಿಂದಿರುವ ವಂಚಕನ ಬೆನ್ನತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಹಿಂದೆ ಫೇಸ್‌ಬುಕ್‌ನಲ್ಲಿ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ ವಂಚಕರು ಇದೀಗ ವಾಟ್ಸಪ್ ಮೂಲಕ ನಕಲಿ ಖಾತೆ ಸೃಷ್ಟಿಸಿ ಹಣಕ್ಕೆ ಬೇಡಿಕೆಯಿಡುತ್ತಿದ್ದು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕಾದ ಅಗತ್ಯವಿದೆ.

- Advertisement -

Related news

error: Content is protected !!