Thursday, June 25, 2026
spot_imgspot_img
spot_imgspot_img

ಸುಳ್ಳು ಸುದ್ದಿ ಪ್ರಕಟಿಸದಂತೆ ಕರಾವಳಿ ಸುದ್ದಿ ಪತ್ರಿಕೆಯ ಸಂಪಾದಕ ರೋಷನ್ ಬೋನಿಫಾಸ್ ಮಾರ್ಟಿಸ್ ಹಾಗೂ ಸಹಸಂಪಾದಕಿ ಅನಿತಾ ಮಾರ್ಟಿಸ್ ವಿರುದ್ಧ ನ್ಯಾಯಾಲಯದ ತಡೆಯಾಜ್ಞೆ

- Advertisement -
- Advertisement -

ಕರಾವಳಿ ಸುದ್ದಿ ಪತ್ರಿಕೆಯ ಸಂಪಾದಕ ರೋಷನ್ ಬೋನಿಫಾಸ್ ಮಾರ್ಟಿಸ್ ಹಾಗೂ ಸಹಸಂಪಾದಕಿ ಅನಿತಾ ಮಾರ್ಟಿಸ್ ವಿರುದ್ಧ ಬಂಟ್ವಾಳದ ಮಾನ್ಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಅಶ್ವಿನ್ ಮಿಲ್ಟನ್ ಸಿಕ್ವೇರಾ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯವು, ಅರ್ಜಿದಾರರ ವಿರುದ್ಧ ಯಾವುದೇ ಸುಳ್ಳು, ಮಾನಹಾನಿಕರ, ದುರುದ್ದೇಶಪೂರಿತ ಸುದ್ದಿ, ಲೇಖನ, ಸಂದೇಶ, ಫೋಟೋ, ವಿಡಿಯೋ ಅಥವಾ ಇತರೆ ಮಾಹಿತಿ ಪ್ರಕಟಿಸದಂತೆ ಹಾಗೂ ಸಾಮಾಜಿಕ ಜಾಲತಾಣ, ವಾಟ್ಸಾಪ್, ಮುದ್ರಣ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮಗಳ ಮೂಲಕ ಹರಡದಂತೆ ಪ್ರತಿವಾದಿಗಳಿಗೆ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ. ನ್ಯಾಯಾಲಯದ ಆದೇಶದಂತೆ, ಮುಂದಿನ ವಿಚಾರಣೆ ನಡೆಯುವವರೆಗೆ ಅರ್ಜಿದಾರರ ಗೌರವಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ವಿಷಯವನ್ನು ಪ್ರಕಟಿಸುವುದಕ್ಕೂ ಅಥವಾ ಹಂಚಿಕೊಳ್ಳುವುದಕ್ಕೂ ನಿರ್ಬಂಧ ಹೇರಲಾಗಿದೆ.

ಅರ್ಜಿದಾರರ ಪರವಾಗಿ ವಕೀಲರಾದ ಪಿ.ಜಯರಾಮ್ ರೈ, ಪ್ರಜ್ವಲ್ ಡಿಸೋಜಾ ಪಾಲಡ್ಕ, ಅವರು ವಾದಿಸಿದ್ದರು.

- Advertisement -

Related news

error: Content is protected !!