- Advertisement -
- Advertisement -
ಚಾಕುವಿನಿಂದ ಇರಿದು ಪತ್ನಿಯನ್ನು ಪತಿ ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹದ ಪರಿಣಾಮ ಈ ಹತ್ಯೆ ನಡೆದಿದೆ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಹೂಲಿಹಳ್ಳಿ ಗ್ರಾಮದಲ್ಲಿ ಕೃತ್ಯ ನಡೆದಿದೆ. ಪವಿತ್ರಾ ಹಳ್ಳೇರ (22) ಕೊಲೆಯಾದ ಮಹಿಳೆ. ರೇವಣ್ಣೆಪ್ಪ ಹಳ್ಳೇರ ಕೊಲೆ ಮಾಡಿದ ಪಾಪಿ ಪತಿ. ಹಲವು ಕಾಲದಿಂದ ಇವರ ನಡುವೆ ಕೌಟುಂಬಿಕ ಕಲಹವಿದ್ದು, ಅದು ಉಲ್ಬಣಿಸಿ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ರೇವಣ್ಣೆಪ್ಪ ಚಾಕುವಿಂದ ಪತ್ನಿಯನ್ನು ಇರಿದಿದ್ದಾನೆ. ಇರಿತಕ್ಕೆ ಒಳಗಾದ ಪತ್ನಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
- Advertisement -