Friday, July 24, 2026
spot_imgspot_img
spot_imgspot_img

ಫರಿದಾಬಾದ್ ಸ್ಫೋಟಕ ಪ್ರಕರಣ: ಶೋಪಿಯಾನ್‌ನಲ್ಲಿ ಮೌಲ್ವಿ ದಂಪತಿ ಬಂಧನ

- Advertisement -
- Advertisement -

ಲಕ್ನೋ: ಫರಿದಾಬಾದ್ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಮೌಲ್ವಿ ದಂಪತಿಯನ್ನು ಜಂಟಿ ಭದ್ರತಾ ಪಡೆಗಳು ಬಂಧಿಸಿವೆ.

ಶ್ರೀನಗರ ಪೊಲೀಸ್ & ಕೌಂಟರ್ ಇಂಟಲಿಜೆನ್ಸ್ ಕಾಶ್ಮೀರ ಜಂಟಿ ಕಾರ್ಯಾಚರಣೆ ನಡೆಸಿ, ಮೌಲ್ವಿ ಇಮಾಮ್ ಇರ್ಫಾನ್ ಅಹ್ಮದ್ ವಾಗೆಯನ್ನು ಬಂಧಿಸಿವೆ. ಆರೋಪಿ ಮನೆಯಿಂದ ಐದು ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತನ ಪತ್ನಿಯನ್ನು ಶಂಕಿತ ಮೂಲಭೂತವಾದ ಸಂಪರ್ಕದ ಮೇಲೆ ಬಂಧಿಸಲಾಗಿದೆ.

ಮೌಲ್ವಿಯ ವಿಚಾರಣೆ ನಡೆಸಿದಾಗ ಮುಜಮ್ಮಿಲ್ ನಂಟು ಪತ್ತೆಯಾಗಿದೆ. ಇರ್ಫಾನ್ ಅಹ್ಮದ್ ವಾಗೆ, ‘ವೈಟ್-ಕಾಲರ್’ ಭಯೋತ್ಪಾದಕ ಮಾಡ್ಯೂಲ್‌ನ ಹಿಂದಿನ ಮಾಸ್ಟರ್ ಮೈಂಡ್ ಎಂದು ಶಂಕಿಸಲಾಗಿದೆ.

ಆರೋಪಿಯು ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳನ್ನು ಮೂಲಭೂತವಾದಿಗಳನ್ನಾಗಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ (ಎಜಿಯುಎಚ್) ಜೊತೆ ಸಂಪರ್ಕ ಹೊಂದಿದೆ ಎಂದು ಹೇಳಲಾಗಿದೆ.

- Advertisement -

Related news

error: Content is protected !!