- Advertisement -
- Advertisement -


ಸುರತ್ಕಲ್: ಸುರತ್ಕಲ್ ನ ಮಂಗಳಪೇಟೆ ನಿವಾಸಿ ಮುಹಮ್ಮದ್ ಫಾಝೀಲ್ ಅವರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಪ್ರಮುಖ ಮೂವರು ಆರೋಪಿಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಕಾವಳಪಡೂರು ಗ್ರಾಮ, ಬಂಟ್ವಾಳ ತಾಲೂಕು ನಿವಾಸಿ ಸುಹಾಸ್ ಶೆಟ್ಟಿ ಯಾನೆ ಸುಭಾಶ್, ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಅಭಿಷೆಕ್ ಯಾನೆ ಅಭಿ, ಕುಳಾಯಿ ನಿವಾಸಿ ಮೋಹನ್ ಸಿಂಗ್ ಯಾನೆ ನೇಪಾಲಿ ಮೋಹನ್ ಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪ್ರಕರಣದಲ್ಲಿ ಜಾಮಿನುಕೋರಿ ಆರೋಪಿಗಳ ಪರ ವಕೀಲರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದು, ಈ ಮೂವರಿಗೆ ನ್ಯಾಯಾಲಯವು ಆರೋಪಿಗಳು ತಲಾ ಒಂದು ಲಕ್ಷ ರೂ. ಬಾಂಡ್ ನ್ಯಾಯಾಲಯಕ್ಕೆ ಕಟ್ಟಬೇಕು. ಪ್ರಕರಣ ಕುರಿತು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಆಗಿದೆ ಎಂದು ತಿಳಿದು ಬಂದಿದೆ.
- Advertisement -








